ಬೀದರ್: ಎಚ್ಐವಿ ಕುರಿತು ಕರಪತ್ರ ವಿತರಿಸಿ ಜನ ಜಾಗೃತಿ
ಬೀದರ್ : ವಿಶ್ವ ಏಡ್ಸ್ ದಿನದ ಅಂಗವಾಗಿ ಚಂದ್ರಶೇಖರ್ ಆಜಾದ್ ಯುವ ಸಂಘದಿಂದ ಏಡ್ಸ್ ರೋಗದ ಕುರಿತು ಕರಪತ್ರ ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ನಗರದ ಹೈದರಾಬಾದ್ ಮುಖ್ಯ ರಸ್ತೆಯಲ್ಲಿರುವ ಬಿದ್ರಿ ಚೌಕ್ ಹತ್ತಿರ ಸಂಚರಿಸುವ ಬೈಕ್ ಸವಾರರಿಗೆ ಹಾಗೂ ಅಲ್ಲಿರುವ ಅಂಗಡಿಗಳಿಗೆ ತೆರಳಿ ಎಚ್.ಐ.ವಿ / ಏಡ್ಸ್ ರೋಗದ ಜಾಗೃತಿ ಕುರಿತು ಕರ ಪತ್ರಗಳನ್ನು ಹಂಚಿದರು. ಜೊತೆಗೆ ಏಡ್ಸ್ ಹರಡುವ ವಿಧಾನ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಭಂಡೆ, ಸಂಘದ ಪ್ರಮುಖರಾದ ಶಶಿಕಾಂತ ಭಾವಿಕಟ್ಟಿ, ಬಸವರಾಜ ಬಿರಾದಾರ್, ಗುಂಡಪ್ಪ ಸೇರಿದಂತೆ ಇತರರು ಇದ್ದರು.
Next Story