ಬೀದರ್ | ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮೃತ್ಯು
ಸಾಂದರ್ಭಿಕ ಚಿತ್ರ(Meta AI)
ಬೀದರ್ : ಕೃಷಿ ಜಮೀನಿನ ಬೆಳೆಗಳ ಸುರಕ್ಷತೆಗಾಗಿ ಹಾಕಲಾದ್ದ ವಿದ್ಯುತ್ ತಂತಿಯ ಬೇಲಿ ಸ್ಪರ್ಶಿಸಿ ರೈತನೊಬ್ಬ ಮೃತಪಟ್ಟಿರುವ ಘಟನೆ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ನಿರಗೂಡಿ ಗ್ರಾಮದ ನಿವಾಸಿ ಸಂಗಮೇಶ ಗಣಮಂತ ಮಜಗಿ (35) ಮೃತಪಟ್ಟ ರೈತ. ಜಮೀನಿನಲ್ಲಿ ಕೃಷಿ ಚಟುವಟಿಕೆ ರಕ್ಷಣೆಗಾಗಿ ವಿದ್ಯುತ್ ತಂತಿಯ ಬೇಲಿ ಹಾಕಲಾಗಿತ್ತು. ಕೃಷಿ ಚಟುವಟಿಕೆ ಕೈಗೊಳ್ಳುವ ಸಲುವಾಗಿ ಜಮೀನಿಗೆ ತೆರಳಿದ ಸಂದರ್ಭದಲ್ಲಿ ವಿದ್ಯುತ್ ಬೇಲಿ ತಗುಲಿ ಸಂಗಮೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Next Story