ಬೀದರ್ | ವೈಯಕ್ತಿಕ ಭಿನ್ನತೆ ಮರೆತು ಸಮಾಜಕ್ಕಾಗಿ ದುಡಿಯುವ ಕಾರ್ಯವಾಗಲಿ : ಸಿ.ಜಿ.ಹಳ್ಳದ್
ಬೀದರ್ : ಸಂಘಟನಕಾರರು ತಮ್ಮಲ್ಲಿರುವ ವೈಯಕ್ತಿಕ ಭಿನ್ನತೆ ಮರೆತು ಸಮಾಜಕ್ಕಾಗಿ ದುಡಿಯುವ ಕಾರ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಅಭಿಪ್ರಾಯಪಟ್ಟರು.
ಇಂದು ಭಾಲ್ಕಿ ಪಟ್ಟಣದ ಅನುಭವ ಯೋಗ ಕೇಂದ್ರದಲ್ಲಿ ಲಿಂಗಾಯತ ನೌಕರರ ಸಂಘ ಭಾಲ್ಕಿ ಘಟಕದ ವತಿಯಿಂದ ಆಯೋಜಿಸಿದ 2024-25 ನೇ ಸಾಲಿನ ʼವಾರ್ಷಿಕ ಮಹಾಸಭೆʼ ಉದ್ಘಾಟಿಸಿ ಅವರು ಮಾತನಾಡಿದರು.
ಹಣಕಾಸಿನ ವ್ಯವಹಾರದೊಂದಿಗೆ ಸಂಘಟನೆ ಮಾಡುವುದು ಉತ್ತಮ ಕಾರ್ಯವಾಗಿದೆ. ಪ್ರತಿಯೊಂದು ಕಾರ್ಯಕ್ಕೂ ಹಣದ ಅವಶ್ಯಕತೆ ಇರುತ್ತದೆ. ಹೀಗಾಗಿ ವೀರಶೈವ ಲಿಂಗಾಯತ ಪತ್ತಿನ ಸೌಹಾರ್ದ ಸಹಕಾರ ಸಂಘ ಸ್ಥಾಪಿಸಿ ಸಮಾಜದ ವ್ಯಕ್ತಿಗಳಿಗೆ ಸಹಾಯ ಮಾಡುವುದರೊಂದಿಗೆ ಅವರ ಕಷ್ಟದಲ್ಲಿ ಧ್ವನಿಯಾಗಲು ಸಹಕಾರಿಯಾಗಿದೆ. ಇದೇ ರೀತಿ ಭಾಲ್ಕಿ ಘಟಕದ ಲಿಂಗಾಯತ ನೌಕರರ ಸಂಘದವರು ಸಮಾಜಕ್ಕಾಗಿ ಉತ್ತಮ ಕಾರ್ಯಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ದಿವ್ಯಸಾನಿಧ್ಯವಹಿಸಿ ಮಾತನಾಡಿ, ಲಿಂಗಾಯತ ನೌಕರರ ಸಂಘದವರು ಬಸವತತ್ವವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಬಸವಣ್ಣನವರ ಕಾಯಕ, ದಾಸೋಹ ತತ್ವದಂತೆ ನಡೆದುಕೊಂಡಲ್ಲಿ ಸಂಘಟನೆಗೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಲಿಂಗಾಯತ ನೌಕರರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಲಿಂಗಾಯತ ನೌಕರರ ಸಂಘದ ರಾಜ್ಯಾಧ್ಯಕ್ಷ ಶಿವರಾಜ ಕಪಲಾಪೂರೆ, ತಾಲೂಕು ಅಧ್ಯಕ್ಷ ಬಸವರಾಜ್ ಬಡದಾಳೆ, ಬಸವರಾಜ್ ದಾನಾ, ವಚನ ಸಾಹಿತ್ಯ ಪರಿಷತ್ ಅದ್ಯಕ್ಷ ಗುಂಡಪ್ಪ ಸಂಗಮಕರ್, ಮಲ್ಲಿಕಾರ್ಜುನ್ ಡೊಣಗಾಪೂರೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಕರ್ ಬನ್ನಾಳೆ, ದಿಲೀಪ್ ಗೊಂಗರಗೆ, ಜಯರಾಜ ದಾಬಶೆಟ್ಟಿ, ಪ್ರಿಯಾ ಓಂ ಪಾಟೀಲ್ , ಶರಣಪ್ಪ ಬಿರಾದಾರ್, ಸಂತೋಷಕುಮಾರ್ ವಾಡೆ, ಸೂರ್ಯಕಾಂತ್ ಸುಂಟೆ, ಶಿವಕುಮಾರ್ ಫುಲಾರಿ, ರವಿ ಕಲಶೆಟ್ಟಿ, ಬಸವಪ್ರಭು ಸೊಲಾಪೂರೆ ಹಾಗೂ ಮಲ್ಲಿಕಾರ್ಜುನ ಕನ್ನಾಳೆ ಸೇರಿ ಅನೇಕರು ಉಪಸ್ಥಿತರಿದ್ದರು.