ಬೀದರ್ | ಮಣ್ಣಿನ ಫಲವತ್ತತೆಯ ಬಗ್ಗೆ ಕಾಳಜಿ ವಹಿಸಿ ತೋಟಗಾರಿಕೆ ಬೆಳೆ ಬೆಳೆಯಬೇಕು: ಡಾ.ಎಸ್.ವಿ.ಪಾಟೀಲ್
ಬೀದರ್ : ಜಿಲ್ಲೆಯ ರೈತರು ತಮ್ಮ ಹೊಲಗಳ ಮಣ್ಣಿನ ಫಲವತ್ತತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕೆಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದ್ದಾರೆ.
ಇತ್ತೀಚಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಮತು ತೋಟಗಾರಿಕೆ ಮಹಾವಿದ್ಯಾಲಯ, ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಜೇಶ ಬಸನಾಳೆ ಇವರ ಕ್ಷೇತ್ರದಲ್ಲಿ ʼಪಪ್ಪಾಯ ಬೆಳೆಯ ಕ್ಷೇತ್ರೋತ್ಸವʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಪ್ಪಾಯ ಬೆಳೆಯು ಒಂದು ಲಾಭದಾಯಕ ಬೆಳೆಯಾಗಿದ್ದು, ಸೂಕ್ತವಾದಂತಹ ತಳಿ ಆಯ್ಕೆಯಾಗಿದೆ. ನೂರಿತ ವಿಜ್ಞಾನಿಗಳಿಂದ ಮಾಹಿತಿ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಲ್ಲಿ, ರೈತರು ಉತ್ತಮ ಲಾಭವನ್ನು ಪಡೆದು ಆರ್ಥಿವಾಗಿ ಸದೃಢರಾಗಬಹುದೆಂದರು.
ಔರಾದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಪಾಟೀಲ್ ಮಾತನಾಡಿ, ರೈತರು ಬೀದರ್ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಾವು ಎದುರಿಸುತ್ತಿರುವಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ರಾಜ್ಯ ಸರಕಅರ ಹಾಗೂ ಕೇಂದ್ರ ಸರಕಾರದಿಂದ ರೈತ ವರ್ಗಕ್ಕೆ ಲಭ್ಯವಿರುವಂತಹ ಯೋಜನೆಗಳು ಮತ್ತು ಸಹಾಯಾನುದಾನಗಳ ಬಗ್ಗೆ ಸಮಗ್ರವಾದಂತಹ ಮಾಹಿತಿಯನ್ನು ನೀಡಿದರು.
ಪ್ರಗತಿಪರ ರೈತ ರಾಜೇಶ ಬಸನಾಳೆ ಮಾತನಾಡಿ, ಪಪ್ಪಾಯ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವು ತಮ್ಮ ಕ್ಷೇತ್ರದಲ್ಲಿ ಆಯೋಜಿಸಿರುವುದರಿಂದ ಹರ್ಷವನ್ನು ವ್ಯಕ್ತಪಡಿಸಿ, ಇದರಿಂದ ನಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತರಿಗೂ ಸಹ ಪಪ್ಪಾಯ ಬೆಳೆಯ ಬಗ್ಗೆ ಆಸಕ್ತಿಯನ್ನುಂಟು ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ವಿ.ಪಿ.ಸಿಂಗ್, ಸಹಾಯಕ ಪ್ರಾಧ್ಯಾಪಕ ಡಾ.ವಿಜಯಮಹಾಂತೇಶ, ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ, ಬೀದರ್ ಜಿಲ್ಲೆಯ 80 ಪ್ರಗತಿಪರ ರೈತರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.