ಬೀದರ್ | ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ಕರ್ನಾಟಕ ಹೊಯ್ಸಳ ವೇದಿಕೆಯಿಂದ ಆಗ್ರಹ
ಬೀದರ್ : ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಖಾಸಗಿ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸೆದ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಕರ್ನಾಟಕ ಹೊಯ್ಸಳ ವೇದಿಕೆ ಒತ್ತಾಯಿಸಿದೆ.
ಮಂಗಳವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕರ್ನಾಟಕ ಹೊಯ್ಸಳ ವೇದಿಕೆಯ ಜಿಲ್ಲಾಧ್ಯಕ್ಷ ಸಂತೋಷ್ ನಾಟೇಕರ್, ಯಡ್ರಾಮಿ ಶಾಲೆಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಶಿಕ್ಷಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಬಾಲಕಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಘೋಷಿಸಬೇಕು. ಹಾಗೆಯೇ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.
ಪಟ್ಟಣದಲ್ಲಿ ನಡೆಸುತ್ತಿರುವ ಆ ಖಾಸಗಿ ಶಾಲೆಯ ಮಾನ್ಯತೆ ರದ್ಧುಪಡಿಸಬೇಕು. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕ್ರೂರ ಶಿಕ್ಷಕನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಸರಕಾರ ಬಾಲಕಿಯ ಕುಟುಂಬಕ್ಕೆ ಸೂಕ್ತ ಭದ್ರತೆ ಹಾಗೂ ಸರಕಾರದ ನೆರವು ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಉತ್ತರ ಕರ್ನಾಟಕ ಉಸ್ತುವಾರಿ ಸಂಜು ಬಿರಾದಾರ ನವದಗಿ, ಸಜ್ಜನ್ ಶೆಟ್ಟಿ, ರಾಜಕುಮಾರ ಡಾವರ್ಗಾವೆ, ಸಚಿನ್ ಅಂಬೆಸಾಂಗವಿ, ಸಿದ್ದು ಜಮಾದಾರ್, ಗಣೇಶ ರಾಥೋಡ್, ಗೋಪಿ ದೇವಿದಾಸ, ಸುರೇಶ, ಕಾಂಬಳೆ, ಮಹದೇವ್ ಸೂರ್ಯವಂಶಿ, ಚಂದ್ರಕಾಂತ್ ಮೈಲಾರೆ, ದೇವಿದಾಸ್ ಲಜವಾಡ, ಧೂಳಪ್ಪ ಮಡಿವಾಳ, ಭಾಗ್ಯೇಶ ಚಿರಾಲಳೆ, ಸಚಿನ್ ಹುಪ್ಳೆ ಹಾಗೂ ಇನ್ನಿತರರು ಭಾಗವಹಿಸಿದ್ದರು.