ಬೀದರ್ | ಕುರ್ಆನ್ ಪ್ರವಚನ ನಿಮಿತ್ತ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ
ಬೀದರ್ : ಕುರ್ ಆನ್ ಪ್ರವಚನದ ನಿಮಿತ್ತ ಸ್ಟೂಡೆಂಟ್ ಇಸ್ಲಾಂ ಆರ್ಗನೈಸೇಶನ್ ವತಿಯಿಂದ ಇಲ್ಲಿನ ಬಸವಕಲ್ಯಾಣ ತಹಶೀಲ್ದಾರ್ ಕಚೇರಿಯಿಂದ ಸಭಾಭವನ ಮೈದಾನದವರೆಗೆ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
3.5 ಕಿಮೀ ವರೆಗೆ ಆಯೋಜನೆಗೊಂಡ ಮ್ಯಾರಥಾನ್ ಸ್ಪರ್ಧೆಯಲ್ಲಿ 200 ಜನರು ಭಾಗವಹಿಸಿದರು. 50ಕ್ಕೂ ಹೆಚ್ಚು ಜನರು ಮ್ಯಾರಥಾನ್ ಓಟ ಪೂರ್ಣಗೊಳಿಸಿದರು.
ಮ್ಯಾರಥಾನ್ ಓಟದಲ್ಲಿ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ 3 ಸಾವಿರ ರೂ. ನಿಗದಿಪಡಿಸಲಾಗಿತ್ತು. ವೆಂಕಟ್ ನಾರಾಯಣ್ ಪ್ರಥಮ ಸ್ಥಾನ, ಪ್ರಶಾಂತ್ ರಾಮ್ ದ್ವಿತೀಯ ಸ್ಥಾನ ಹಾಗೂ ಮಂಡಾಳೆ ಮಹೇಶ್ ಕಲ್ಲೇಶ್ವರ್ ತೃತೀಯ ಸ್ಥಾನ ಪಡೆದಿದ್ದಾರೆ. ನಾಳೆ ಬಹುಮಾನ ವಿತರಿಸಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.
ಶಾಂತಿ ಮತ್ತು ಸೌಹಾರ್ದತೆ ಮತ್ತು ಸಂಘಟಿತವಾಗಿರುವ ಸಂದೇಶ ಸಾರುವ ಹಿನ್ನೆಲೆಯಲ್ಲಿ ಈ ಮ್ಯಾರಥಾನ್ ಆಯೋಜಿಸಲಾಗಿತ್ತು. ಮುಸ್ಲಿಂ ಬೈತುಲ್ ಮಾಲ್ ಅಧ್ಯಕ್ಷರಾದ ಮಕ್ದುಮ್ ನಿಲಂಗೆ, ಆರ್ಮಿ ಅಧಿಕಾರಿ ರೆಡ್ಡಿ, ಮಿರ್ ಫರ್ಕುನ್ ಅಲಿ ಸೇರಿ ಗಣ್ಯರು ಯುವಕರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಥಳೀಯ ಅಧ್ಯಕ್ಷರಾದ ಮುಹಮ್ಮದ್ ಅಸ್ಲಮ್ ಜನಾಬ್ ಅವರು ಕುರಾನ್ ಪ್ರವಚನದಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದ್. ಸ್ವಸ್ಥ ಭಾರತ್, ಯಂಗ್ ಭಾರತ್ ಮತ್ತು ದ್ವೇಷ ಮುಕ್ತ ಭಾರತ್ ವನ್ನಾಗಿಮಾಡಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆ ಸ್ಥಾಪಿಸಬೇಕೆಂದು ಮುಜಾಹಿದ್ ಪಾಷಾ ಕುರೇಶಿ ಕರೆ ನೀಡಿದರು.
ಅರ್ಜುನ್ ಕನಕ್ ಮಾತನಾಡಿ, ಎಲ್ಲರೂ ಕೂಡಿಕೊಂಡು ಜೊತೆಯಾಗಿ ಬಾಳುವುದೇ ನಿಜವಾದ ಸಮಾಜದ ಅರ್ಥವಾಗಿದೆ. ಕುಡಿ ಬಾಳುವುದು ಭಾರತದ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಜಮಾತೆ ಇಸ್ಲಾಂ ಹಿಂದ್ ಘಟಕದ ಅಧ್ಯಕ್ಷರಾದ ಆಫೀಸ್ ಅಸ್ಲಂ, ಪ್ರವಚನದ ಸ್ವಾಗತ ಸಮಿತಿಯ ಅಧ್ಯಕ್ಷರದ ಮುಜಾಹಿದ್ ಪಾಷ ಕುರೇಶಿ, ಕಾರ್ಯಧ್ಯಕ್ಷ ಡಾ.ಜಿ.ಎಸ್.ಭೂ ರಳೆ, ಸಿಪಿಐ ಅಲಿ, ತಾಲ್ಲೂಕು ಸದ್ಭಾವನ ಮಂಚದ ಅಧ್ಯಕ್ಷ ಅರ್ಜುನ್ ಖನಕ, ಫಾದರ್ ಫಾಸ್ಟರ್ ವಿಮಾನುವಲ್ ಚಾಮಜಿದನ, ಇಮಾಮ್ ಆಫೀಸ್, ಎಸ್.ಐ.ಓ ಅಧ್ಯಕ್ಷ ಅಬ್ದುಲ್ ಗಫೂರ್, ಮ್ಯಾರಥಾನ್ ಸಂಘಟಕ ಸೈಯದ್ ಶಾಬಾಜ, ಸರ್ಕಲ್ ಇನ್ಸ್ಪೆಕ್ಟರ್ ಅಲಿಸಾಬ್, ಡಾ.ಜಬಿ ಉಲ್ಲಾಖಾನ್ ಹಾಗೂ ಇನ್ನಿತರರು.