ಬೀದರ್ | ಮಹಿಳಾ ಫಲಾನುಭವಿಗಳಿಗೆ ಹೋಲಿಗೆ ಯಂತ್ರ ವಿತರಣೆ ಮಾಡಿದ ಸಚಿವ ರಹೀಮ್ ಖಾನ್

ಬೀದರ್ : 2023-24ನೇ ಸಾಲಿನಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆಯ್ಕೆಯಾದ 27 ಮಹಿಳಾ ಫಲಾನುಭವಿಗಳಿಗೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಿದರು.
ಇಂದು ನಗರದಲ್ಲಿ ಹೊಲಿಗೆ ಯಂತ್ರ ವಿತರಣೆ ಮಾಡಿ, ಮಾತನಾಡಿದ ಅವರು, ಹೊಲಿಗೆ ಯಂತ್ರಗಳನ್ನು ಸರಬರಾಜು ಮಾಡಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಈ ಯೋಜನೆಯಿಂದ ಸ್ವಂತ ದುಡಿಮೆ ಮಾಡಿ ಆರ್ಥಿಕವಾಗಿ ಮುಂದೆ ಬರಲು ತುಂಬಾ ಸಹಾಯವಾಗುತ್ತದೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story