ಬೀದರ್ | ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಸಂಸದ ಸಾಗರ್ ಖಂಡ್ರೆ ಚಾಲನೆ
ಬೀದರ್ : ಭಾಲ್ಕಿ ತಾಲ್ಲೂಕಿನ ಗಣೇಶಪುರ್ ವಾಡಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಸಂಸದ ಸಾಗರ್ ಖಂಡ್ರೆ ಅವರು ಅಡಿಗಲ್ಲು ಹಾಕಿದರು.
ಗ್ರಾಮದ ಶಂಕರರಾವ್ ಭೂಸುಂಡೆ ಅವರ ಮನೆಯಿಂದ ಲೋಕೇಶ್ ಭೂರೆ ಅವರ ಮನೆಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದ ಅಡಿಯಲ್ಲಿ 20 ಲಕ್ಷ ರೂ. ಮೌಲ್ಯದ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಉಪಾಧ್ಯಕ್ಷ ಅಶೋಕ್ ಗಾವಕವಾಡ್, ಪ್ರಶಾಂತ್ ಕೋಟಗೇರಾ, ಯಾದವರಾವ್ ಒಳಸಂಗ್, ಶ್ರೀನಿವಾಸ್ ಮೇತ್ರೆ ಹಾಗೂ ಭೀಮಣ್ಣ ವರವಟ್ಟಿಕರ್ ಸೇರಿದಂತೆ ಗ್ರಾಮದ ಅನೇಕರು ಭಾಗವಹಿಸಿದ್ದರು.
Next Story