ಬೀದರ್ | ಮಾ.2 ರಂದು ಸಾಗರ್ ಖಂಡ್ರೆ, ಡಾ.ಎಂ.ಜಿ.ಮೂಳೆ ಅವರಿಗೆ ಸನ್ಮಾನ ಸಮಾರಂಭ

ಬೀದರ್ : ಇತ್ತೀಚಿಗೆ ನೂತನವಾಗಿ ಸಂಸದರಾಗಿ ಆಯ್ಕೆಯಾದ ಸಾಗರ್ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಡಾ.ಎಂ.ಜಿ.ಮೂಳೆ ಅವರಿಗೆ ಮಾ.2 ರಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ದಿಗಂಬರರಾವ್ ಮಾನಕಾರಿ ತಿಳಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11:30 ಗಂಟೆಗೆ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು, ಶ್ರೀ ಜಗದ್ಗುರು ವೇದಾಚಾರ್ಯ ಮಂಜುನಾಥ್ ಭಾರತಿ ಅವರು, ಸಂಸದ ಸಾಗರ್ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಎಂ.ಜಿ.ಮೂಳೆ ಅವರನ್ನು ಸತ್ಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಸುಮಾರು 2 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ವಾಗತ ಹಾಗೂ ಸತ್ಕಾರ ಸಮಿತಿ ಅಧ್ಯಕ್ಷ ಅಶೋಕರಾವ್ ಕಣಜಿಕರ್, ಕಾರ್ಯದರ್ಶಿ ವೆಂಕಟೇಶ್ ಮೆಹೆಂದೆ, ಸಮಾಜದ ಮುಖಂಡರಾದ ಜನಾರ್ಧನ್ ಬಿರಾದಾರ್, ಶಂಕರರಾವ್ ಪಾಟೀಲ್, ತಾತ್ಯಾರಾವ್ ಪಾಟೀಲ್, ಪಂಚಶೀಲ್ ಪಾಟೀಲ್, ರಂಜಿತ್ ಪಾಟೀಲ್ ಹಾಗೂ ವಿದ್ಯವಾನ್ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.