ಬೀದರ್ | ಸಮಯ ಹಾಳು ಮಾಡದೇ ವಿದ್ಯಾರ್ಥಿಗಳು ಅಧ್ಯಯನದತ್ತ ಗಮನಹರಿಸಿ : ರಾಜೇಂದ್ರ ಕುಮಾರ್ ಮಣಗೀರೆ
ಬೀದರ್ : ಮಕ್ಕಳು ಸಮಯ ಹಾಳು ಮಾಡಿಕೊಳ್ಳದೆ ಅಧ್ಯಯನದತ್ತ ಗಮನ ಕೊಡಬೇಕು ಎಂದು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರಕುಮಾರ್ ಮಣಗೀರೆ ಅವರು ಕರೆ ನೀಡಿದ್ದಾರೆ.
ತಾಲ್ಲೂಕಿನ ಆಣದೂರ್ ಗ್ರಾಮದ ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆ ಓದುವ, ಪಠ್ಯ ಪುಸ್ತಕಗಳಲ್ಲದೆ ವಿವಿಧ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಾಧ್ಯಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಆಣದೂರ್ ಪಿಎಚ್ಸಿ ವೈದ್ಯಾದಿಕಾರಿ ಬಸವಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಪೌಷ್ಟಿಕಾಂಶ ಯುಕ್ತ ಆಹಾರವನ್ನು ಸೇವಿಸಬೇಕು. ಹಾಳು ಮೂಳು ತಿಂಡಿ ತಿನ್ನಬಾರದು. ಬೆಳಿಗ್ಗೆ ಬೇಗ ಏಳಬೇಕು. ವ್ಯಾಯಮ ನಿಯಮಿತವಾಗಿ ಮಾಡಬೇಕು. ಈ ಮೂಲಕ ಆರೋಗ್ಯಯುತ ಜೀವನ ನಡೆಸಲು ಮಕ್ಕಳಿಗೆ ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರಕುಮಾರ್ ಮಣಗೀರೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಗ್ರಾಮ ವಿಕಾಸ್ ಟ್ರಸ್ಟ್ ಅಧ್ಯಕ್ಷ ಬಸವರಾಜ್ ಬಶೆಟ್ಟಿ, ವಿರಶೆಟ್ಟಿ, ಚನ್ನಶೆಟ್ಟಿ, ಡಾ.ಬಸವಪ್ರಸಾದ್ ಮಣಗಿರೆ, ಸಹಶಿಕ್ಷಕರಾದ ಪ್ರತಾಪಕುಮಾರ್ ಪ್ರಶಾಂತ್ ಧ್ಯಾಡೆ ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು.