ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ: ಸಚಿವ ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
ಬೀದರ್ : ಬಿಜೆಪಿ ಅವಧಿಯಲ್ಲಿ ದೇವಾಲಯ, ರೈತರಿಗೆ ನೋಟಿಸ್ ಕೊಟ್ಟು ಖಾತೆ ಬದಲಾವಣೆ ಆಗಿದ್ದು ಜನರಿಗೆ ಗೊತ್ತಿದೆ. ನಿಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡುವುದು ಜನರಿಗೆ ಗೊತ್ತಾಗುವುದಿಲ್ಲವೇ?. ಪಕ್ಷದ ಒಳ ಜಗಳ ಬೀದಿಗೆ ತಂದು ಬಡ ಜನರನ್ನು ಬಲಿಪಶು ಮಾಡ್ತಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಕ್ಫ್ ವಿವಾದದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಯಾವ ರೈತರ ಭೂಮಿ ಹೋಗೋಕೆ ಬಿಡಲ್ಲ, ಯತ್ನಾಳ್ ಅವರ ಕಪಟ ಬುದ್ಧಿ ಇದು. ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಸಚಿವ ರಹೀಮ್ ಖಾನ್ ಸೇರಿದಂತೆ ಹಲವರು ಇದ್ದರು.
Next Story