ದೇವರ ದಾಸಿಮಯ್ಯನವರು ವಚನಗಳ ಮೂಲಕ ಮೌಢ್ಯವನ್ನು ಖಂಡಿಸಿದ್ದಾರೆ : ಸಚಿವ ಈಶ್ವರ್ ಖಂಡ್ರೆ

ಬೀದರ್ : ದೇವರ ದಾಸಿಮಯ್ಯನವರು 12ನೇ ಶತಮಾನದಲ್ಲಿ ವಚನಗಳು ಹೇಳಿದರೂ ಕೂಡ ಇಂದಿಗೂ ಅವು ಪ್ರಸ್ತುತವಾಗಿವೆ. ಅವರು ವಚನಗಳ ಮೂಲಕ ಮೌಢ್ಯವನ್ನು ಖಂಡಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಇಂದು ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಸುಧಾರಣೆಗೆ ವಚನಕಾರ ದೇವರ ದಾಸಿಮಯ್ಯನವರ ಕೊಡುಗೆ ಅಪಾರವಾಗಿದೆ. ತಮ್ಮ ವಚನಗಳ ಮೂಲಕ ಸಮಾನತೆ, ಮೌಢ್ಯಗಳ ಖಂಡನೆ ಮಾಡುವ ಮೂಲಕ ಮಹಿಳೆಯರಿಗೆ ಸ್ವಾತಂತ್ರ‍್ಯ, ಸಮಾನತೆ ಒದಗಿಸುವುದು ಮತ್ತು ಸಮಾಜವನ್ನು ಒಂದುಗೂಡಿಸುವ ಕೆಲಸ ಅವರ ವಚನಗಳಲ್ಲಿ ಕಾಣಬಹುದಾಗಿದೆ ಎಂದರು.
ನೇಕಾರ ಮತ್ತು ಜಾಡರ ಸಮುದಾಯದವರು ಕಾರ್ಯ ನಿಷ್ಠಾವಂತರಾಗಿದ್ದಾರೆ. ನಾಗರಿಕತೆಯ ಅತ್ಯುತ್ತಮ ಬೆಳವಣಿಗೆಗೆ ಇವರ ಕೊಡುಗೆ ಅಪಾರವಾಗಿದೆ. ನಮ್ಮ ಸರ್ಕಾರ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಯೋಜನೆ ಜಾರಿಗೆ ತಂದಿದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಲಿಂಗಾಯತ ಮಹಾಮಠದ ಪ್ರಭುದೇವ ಮಹಾಸ್ವಾಮಿಜಿ ಅವರು ತಮ್ಮ ಅತಿಥಿ ಉಪನ್ಯಾಸ ನೀಡಿ, ದೇವರ ದಾಸಿಮಯ್ಯನವರು 1,130 ರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ಹೆಸರು 6 ವಚನಕಾರರ 12 ವಚನಗಳಲ್ಲಿ ಕಾಣಬಹುದು. ಇವರ 176 ವಚನಗಳು ದೊರೆತಿವೆ. ಇವರು ರಾಮನಾಥ ಎಂಬ ಅಂಕಿತನಾಮದಿಂದ ವಚನ ರಚಿಸಿದ್ದಾರೆ. ಸಮಾಜದ ಸುಧಾರಣೆಗೆ ಮತ್ತು ಸಮಾಜದ ಒಳಿತಿಗಾಗಿ ಇವರ ವಚನಗಳು ಮುಖ್ಯವಾಗಿವೆ ಎಂದು ನುಡಿದರು.
ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್ ಅವರು ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ರಥ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶಿಲವಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸಿದ್ರಾಮ್ ಸಿಂಧೆ, ಸಮಾಜದ ಮುಖಂಡರಾದ ಸೋಮಶೇಖರ್ ಅಮಲಾಪೂರೆ, ರಾಮಕೃಷ್ಣ ಸಾಳೆ, ನಾಗಪ್ಪ ಜಮಗಿ, ಮಹಾದೇವ್ ಚೌಡೆಕರ್, ಶರಣಪ್ಪ ಹಾವ