ಸಾರ್ವಜನಿಕರಿಗೆ ತುರ್ತು ಔಷಧಿ ಲಭ್ಯವಾಗುವಂತೆ ನಿಗಾ ವಹಿಸಿ : ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಆಸ್ಪತ್ರೆಗೆ ಬರುವ ಸಾಮಾನ್ಯ ಹಾಗೂ ಬಡ ರೋಗಿಗಳಿಗೆ ಅಗತ್ಯ ತುರ್ತು ಔಷಧಿಗಳು ಲಭ್ಯವಾಗುವಂತೆ ಆರೋಗ್ಯಾಧಿಕಾರಿಗಳು ನಿಗಾ ವಹಿಸುವಂತೆ ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಇಂದು ಬಿದ್ರಿ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹೊರ ರೋಗಿಗಳೊಂದಿಗೆ ಚರ್ಚೆ ನಡೆಸಿದರು.
ಹಾವು ಮತ್ತು ನಾಯಿ ಕಡಿತ ಸೇರಿದಂತೆ ಇತರ ತುರ್ತು ಔಷಧಿಗಳು ಆಸ್ಪತ್ರೆಗೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಶಂಕರ್ ಟಿ. ಅವರಿಗೆ ಸೂಚನೆ ನೀಡಿದರು.
Next Story