ಬೀದರ್ | ರಸ್ತೆಯಲ್ಲೇ ಹೊತ್ತಿ ಉರಿದ ಕೆಎಸ್ಸಾರ್ಟಿಸಿ ಬಸ್; ಪ್ರಯಾಣಿಕರು ಅಪಾಯದಿಂದ ಪಾರು

ಬೀದರ್ : ಕೆಎಸ್ಸಾರ್ಟಿಸಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಔರಾದ್ ತಾಲ್ಲೂಕಿನ ಕಪ್ಪಿಕೆರೆ ಕ್ರಾಸ್ ಬಳಿ ನಡೆದಿದೆ.
ಇಂದು ಬೀದರ್ ಕಡೆಯಿಂದ ಔರಾದ್ ಕಡೆಗೆ ಪ್ರಯಾಣಿಕರನ್ನು ಹೊತ್ತು ಬಸ್ಸು ಹೊರಟಿತ್ತು. ಕಪ್ಪಿಕೆರೆ ಕ್ರಾಸಿನ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಬಸ್ಸಿನಿಂದ ಹೊರಬಂದು ಪಾರಾಗಿದ್ದಾರೆ. ಬೆಂಕಿಯಿಂದ ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಕಿ ತಗುಲಿದ್ದಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಆದರೆ ಅತೀ ಹೆಚ್ಚಾಗಿರುವ ಬಿಸಿಲಿನ ಕಾರಣದಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಹಾಗೆಯೇ ಸುಟ್ಟು ಕರಕಲಾಗಿದ್ದ ನಿಂತಿದ್ದ ಬಸ್ ಅನ್ನು ಕೆಎಸ್ಸಾರ್ಟಿಸಿ ಸಂಸ್ಥೆಯವರು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
Next Story