ಕೆ-ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ತಡೆ : 24 ಗಂಟೆಯೊಳಗೆ ವರದಿ ಸಲ್ಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

ಈಶ್ವರ್ ಖಂಡ್ರೆ
ಬೀದರ್ : ನಗರದ ಚೌಬಾರ ನಿವಾಸಿ ಸುಚಿವ್ರತ್ ಅವರು ಕೆ-ಸಿಇಟಿ ಗಣಿತ ವಿಷಯದ ಪರೀಕ್ಷೆಗೆ ಜನಿವಾರ ತೆಗೆದಿಡದ ಹೊರತು ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದು ಸಿಬ್ಬಂದಿ ತಡೆಯೋಡ್ಡಿದ್ದರ ಬಗ್ಗೆ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿಯು ಗುಂಪಾ ಸಮೀಪದ ಸಾಯಿ ಸ್ಪೂರ್ತಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಗ, ಆತನು ಹಾಕಿದ ಜನಿವಾರ ತೆಗೆದಿಡದ ಹೊರತು ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದು ಸಿಬ್ಬಂದಿ ತಡೆಯೊಡ್ಡಿದ್ದರು. ಆವಾಗ ಆ ವಿದ್ಯಾರ್ಥಿ ಮನನೊಂದು ಪರೀಕ್ಷೆ ಬರೆಯದೆ ಮನೆಗೆ ತೆರಳಿದ್ದನು.
ಕೂಡಲೇ ಘಟನೆಯ ಕುರಿತಂತೆ ಉಪ ವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ ನಿಯಮಾನುಸಾರ ಶಿಸ್ತು ಕ್ರಮವಹಿಸಲು ಮತ್ತು 24 ಗಂಟೆಗಳ ಒಳಗಾಗಿ ವರದಿ ಸಲ್ಲಿಸಲು ಅವರು ಸೂಚಿಸಿದ್ದಾರೆ.
Next Story