ತೆಲಂಗಾಣ | ಎನ್ಕೌಂಟರ್ನಲ್ಲಿ 6 ಮಾವೋವಾದಿಗಳ ಹತ್ಯೆ
Photo : ANI
ತೆಲಂಗಾಣ : ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ನಕ್ಸಲೀಯರ ಭದ್ರಕೋಟೆಯಾಗಿದ್ದ ಕರಕಗುಡೆಂ ಮಂಡಲದ ನೀಲಾದ್ರಿಗುಟ್ಟಾ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ 6 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇಂದು ಬೆಳಿಗ್ಗೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ನೀಲಾಂದ್ರಿಗುಟ್ಟದ ಬೆಟ್ಟದ ಬಳಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೆಲಂಗಾಣದ ಪ್ರಮುಖ ಮಾವೋವಾದಿ ನಾಯಕರೊಬ್ಬರು ಎನ್ಕೌಂಟರ್ನಲ್ಲಿ ಹತರಾಗಿದ್ದಾರೆಂದು ನಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.
ಛತ್ತೀಸ್ಗಢ ಮೂಲದ ಶಸ್ತ್ರಸಜ್ಜಿತ ಮಾವೋವಾದಿ ಬಂಡುಕೋರರ ಗುಂಪು ಇತ್ತೀಚೆಗೆ ಅರಣ್ಯದ ಗಡಿಯನ್ನು ದಾಟಿ ತೆಲಂಗಾಣಕ್ಕೆ ನುಗ್ಗಿದೆ ಎಂದು ಪೊಲೀಸರು ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ನೀಲಾದ್ರಿಗುಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದರು.
Next Story