ನೆದರ್ಲ್ಯಾಂಡ್ಸ್ ಗೆ 340 ರನ್ ಗುರಿ ನೀಡಿದ ಇಂಗ್ಲೆಂಡ್
ವಿಶ್ವಕಪ್ : ಬೆನ್ ಸ್ಟೋಕ್ಸ್ ಶತಕ, ಉತ್ತಮ ರನ್ ಪೇರಿಸಿದ ಆಂಗ್ಲರು
PHOTO : cricketworldcup.com
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ನೆದರ್ಲ್ಯಾಂಡ್ ಗೆ ಗೆಲ್ಲಲು ಇಂಗ್ಲೆಂಡ್ 340 ರನ್ ಗಳ ಗುರಿ ನೀಡಿದೆ. 9 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ರಕ್ಷಣಾತ್ಮಕ ಆಟ ಪ್ರದರ್ಶಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ಗಳಾದ ಜಾನಿ ಬೈಸ್ಟೋವ್ ಮತ್ತು ಡೇವಿಡ್ ಮಲನ್ ಉತ್ತಮ ಆರಂಭ ಪಡೆದರು. 6.6 ಓವರ್ನಲ್ಲಿ ಜಾನಿ ಬೈಸ್ಟೋವ್ 17 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 15 ರನ್ ಗೆ ಆರ್ಯನ್ ದತ್ತ್ ಎಸೆತದಲ್ಲಿ ಪಾಲ್ ವ್ಯಾನ್ ಮೀಕೆರನ್ ಗೆ ಕ್ಯಾಚಿತ್ತರು. 48 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಗೆ ನಂತರ ಬಂದ ಜೋ ರೂಟ್ ಚೇತರಿಕೆ ನೀಡಿದರು.
ಡೇವಿಡ್ ಮಲನ್ ಜೂತೆಯಾಟದಲ್ಲಿ 20.2 ಓವರ್ನಲ್ಲಿ ತಂಡ 133 ರನ್ ಗಳಿಸಿದ್ದಾಗ ಲೋಗನ್ ವ್ಯಾನ್ ಬೀಕ್ ಎಸೆತದಲ್ಲಿ ಬೌಲ್ಡ್ ಆದರು. ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಿಸಿದ ಡೇವಿಡ್ ಮಲನ್ 74 ಎಸೆತಗಳಲ್ಲಿ 2 ಸಿಕ್ಸರ್ 10 ಬೌಂಡರಿಗಳೊಂದಿಗೆ 87 ರನ್ ಗಳಿಸಿದ್ದಾಗ ಲೋಗನ್ ವ್ಯಾನ್ ಬೀಕ್ ಅವರ ರನೌಟ್ ಗೆ ಬಲಿಯಾದರು. ನಂತರ ಬಂದ ಬ್ಯಾಟರ್ಗಳಾದ ಹ್ಯಾರಿ ಬ್ರೂಕ್ 11, ನಾಯಕ ಬಟ್ಲರ್ 5, ಮೊಹಿನ್ ಅಲಿ 4, ಡೇವಿಡ್ ವಿಲ್ಲಿ 6 ರನ್ ಗಳಿಸಲಷ್ಟೇ ಶಕ್ತರಾದರು.
ನಾಲ್ಕನೇ ಕ್ರಮಾಂಕದಲ್ಲಿ ಬಂದ ಬೆನ್ ಸ್ಟೋಕ್ಸ್ ಕ್ರೀಸ್ ಗೆ ಅಂಟಿಕೊಂಡು ರಕ್ಷಣಾತ್ಮಕ ಆಟವಾಡಿದರು. 84 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಗಳ ಸಹಿತ 108 ರನ್ ಗಳಿಸಿ ಕೊನೇ ಕ್ಷಣದಲ್ಲಿ ಔಟ್ ಆದರು. ಅವರಿಗೆ ಸಾಥ್ ನೀಡಿದ ಕ್ರಿಸ್ ವೋಕ್ಸ್ 45 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಗಳಿಸಿ ಬಾಸ್ ಡಿ ಲೀಡೆಗೆ ವಿಕೆಟ್ ಒಪ್ಪಿಸಿದರು. ಆದಿಲ್ ರಶೀದ್ 1, ಅಂಕಿತ್ ಸನ್ 2 ರನ್ ಗಳಿಸಿದರು.
ನೆದರ್ಲ್ಯಾಂಡ್ ಪರ ಬಾಸ್ ಡಿ ಲೀಡೆ ತಲಾ 3 ವಿಕೆಟ್ ಪಡೆದರು. ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್ತ್ ತಲಾ 2 ವಿಕೆಟ್ ಪಡೆದರು. ಪಾಲ್ ವ್ಯಾನ್ ಮೀಕೆರನ್ ಒಂದು ವಿಕೆಟ್ ಪಡೆದರು.