ದಕ್ಷಿಣ ಆಫ್ರಿಕಾಗೆ 102 ರನ್ ಗಳ ಜಯ
ವಿಶ್ವಕಪ್ ಕ್ರಿಕೆಟ್ : 326ಕ್ಕೆ ಶ್ರೀಲಂಕಾ ಆಲೌಟ್
PHOTO : PTI
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 102 ರನ್ ಗಳ ಜಯ ಗಳಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ದಕ್ಷಿಣ ಆಫ್ರಿಕಾ ನಿಗದಿತ 50 ಒವರ್ ಗಳಲ್ಲಿ ದಾಖಲೆಯ ಮೂರೂ ಶತಕ ಸಹಿತ ವಿಶ್ವಕಪ್ ಇತಿಹಾಸದಲ್ಲಿನ ದಾಖಲೆಯ 428 ರನ್ ಗಳ ಬೃಹತ್ ಮೊತ್ತ ವನ್ನು ಪೇರಿಸಿತ್ತು. ಈ 429 ರನ್ ಗಳ ಕಠಿಣ ಗುರಿ ಬೆನ್ನು ಹತ್ತಿದ ಶ್ರೀಲಂಕಾ ತನ್ನ 1.1 ಓವರ್ ನಲ್ಲಿ ಆರಂಭಿಕ ಬ್ಯಾಟರ್ ಪತುನ್ ನಿಸಂಕಾ ಶೂನ್ಯ ಕ್ಕೆ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರೆ ಕುಶಾಲ್ ಪಾರೆರಾ 7 ರನ್ ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಒಂದು ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಕುಸಾಲ್ ಮೆಂಡಿಸ್ 4 ಬೌಂಡರಿ 8 ಸಿಕ್ಸರ್ ಸಹಿತ 76 ಗಳಿಸಿ ಲಂಕನ್ನರಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ 12.4 ಒವರ್ ನಲ್ಲಿ ರಬಾಡ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 5 ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಚರಿತ್ ಹಸಲಂಕ ಹಾಗೂ ನಾಯಕ ದಾಸನ್ ಶನಕ ಕ್ರಮವಾಗಿ 79, 68 ಗಳಿಸಿದರೂ ನಂತರ ಬ್ಯಾಟಿಂಗ್ ಗೆ ಬಂದ ಯಾವ ಲಂಕಾ ಆಟಗಾರರು ಸಹ ದಕ್ಷಿಣ ಆಫ್ರಿಕಾ ಬೌಲರ್ ಗಳ ವಿರುದ್ಧ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಪರಿಣಾಮ 44.5 ಒವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಎದುರು 102 ರನ್ ಗಳ ಸೋಲೊಪ್ಪಿಕೊಂಡಿತು.
ಆಫ್ರಿಕಾ ಪರ ಜೆರಾಲ್ಡ್ 3 ಪಡೆದರೆ ಮಾರ್ಕೋ ಜಾನ್ಸನ್ ಮತ್ತುಕೇಶವ್ ಮಹಾರಾಜ್, ರಬಾಡ ತಲಾ 2 ವಿಕೆಟ್ ಕಬಳಿಸಿದರು. ಲುಂಗಿ ಗಿಡಿ ಒಂದು ವಿಕೆಟ್ ಪಡೆದರು.