ಪ್ಯಾರಿಸ್ ಒಲಿಂಪಿಕ್ಸ್ | ವಿನೇಶ್ ಪೋಗಟ್ ಮೇಲ್ಮನವಿ ತೀರ್ಪು ನಾಳೆಗೆ ಮುಂದೂಡಿಕೆ
ಪ್ಯಾರಿಸ್ : ಒಲಿಂಪಿಕ್ಸ್ ಫೈನಲ್‌ನಲ್ಲಿ ತನ್ನನ್ನು ಅನರ್ಹಗೊಳಿಸಿರುವುದರ ವಿರುದ್ಧ ಭಾರತೀಯ ಕುಸ್ತಿತಾರೆ ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿಯ ಕುರಿತ ತನ್ನ ಅಂತಿಮ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ನಾಳೆ(ರವಿವಾರ)ಗೆ ಮುಂದೂಡಿದೆ.
ತೂಕಹೆಚ್ಚಿದ್ದ ಕಾರಣಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ನ ಫೈನಲ್ ಪಂದ್ಯವಾಡಲು ಅನರ್ಹರಾಗಿದ್ದ ವಿನೇಶ್ ಫೋಗಟ್, ಮೇಲ್ಮನವಿ ಸಲ್ಲಿಸಿದ್ದರು. 50 ಕೆ ಜಿ ವಿಭಾಗದ ಮಹಿಳೆಯರ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ವಿನೇಶ್ 100. ಗ್ರಾಂ ಅಧಿಕ ತೂಕವಿದ್ದ ಕಾರಣಕ್ಕೆ, ಫೈನಲ್ ಪಂದ್ಯ ಆಡುವುದರಿಂದ ಅನರ್ಹರಾಗಿದ್ದರು.
Next Story