ಚಾಮರಾಜನಗರ: ಯೂರಿಯಾ ಮಿಶ್ರಿತ ನೀರು ಸೇವನೆ ಶಂಕೆ; ಜಿಂಕೆ, ಹಸು ಸಾವು

ಚಾಮರಾಜನಗರ : ಹನೂರು ಸಮೀಪದ ಉದ್ದನೂರು ಗ್ರಾಮದ ಹೊರವಲಯದ ಜಮೀನೊಂದರ ಸಮೀಪದಲ್ಲಿ 3 ಹಸು ಮತ್ತು1 ಜಿಂಕೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿವೆ.
ಉದ್ದನೂರು ಗ್ರಾಮದ ಕ್ಯಾತಯ್ಯ ಎಂಬುವವರು ಎಂದಿನಂತೆ ಸೋಮವಾರ ಬೆಳ್ಳಿಗ್ಗೆ ಜಾನುವಾರರುಗಳನ್ನುವ ಮೇಯಲು ಬಿಟ್ಟಿದ್ದರು. ಮದ್ಯಾಹ್ನ ವೇಳೆ ಮೂರು ಹಸು ದಿಢೀರ್ ಮೃತಪಟ್ಟಿರುವ ಜೊತೆಗೆ ಕಾಡದಿಂದ ನಾಡಿಗೆ ಬಂದಿದ್ದಂತಹ ಜಿಂಕೆಯು ಕೂಡ ಸಾವನ್ನಪ್ಪಿರುವುದನ್ನು ಸಾರ್ವಜನಿಕರು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಯೂರಿಯ ಮಿಶ್ರಣದ ನೀರನ್ನು ಕುಡಿದು ಪ್ರಾಣಿಗಳು ಸತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
Next Story