ಚಾಮರಾಜನಗರ | ದಿಂಬಂ ಘಾಟ್ ನ 15ನೇ ತಿರುವಿನಲ್ಲಿ ಲಾರಿ ಪಲ್ಟಿ
ಚಾಮರಾಜನಗರ: ಅಂತಾರಾಜ್ಯ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಉರುಳಿಬಿದ್ದ ಪರಿಣಾಮ ಉಭಯ ರಾಜ್ಯಗಳ ನಡುವೆ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ಘಾಟ್ ನಲ್ಲಿ ನಡೆದಿದೆ.
ದಿಂಬಂ ಘಾಟ್ ನ 15ನೇ ತೀವ್ರ ತಿರುವಿನಲ್ಲಿ ಬಹು ಚಕ್ರ ಹೊಂದಿರುವ ಲಾರಿಯೊಂದು ಪಲ್ಟಿಯಾಗಿದೆ. ಇದರಿಂದ ತಮಿಳುನಾಡಿನ ಸತ್ಯಮಂಗಲಂ, ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸಲು ಹರ ಸಾಹಸ ಪಡಬೇಕಾಯಿತು.
ಘಟನಾ ಸ್ಥಳಕ್ಕೆ ತಮಿಳುನಾಡಿನ ಪೊಲೀಸರು ಆಗಮಿಸಿ ರಸ್ತೆಯ ಮದ್ಯೆ ಬಿದ್ದಿರುವ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
Next Story