ಹನೂರು | ಸಿಎಂರನ್ನು ಮಾತನಾಡಿಸಬೇಕು ಎಂದು ಅಳುತ್ತಿದ್ದ ಬಾಲಕಿಯಿಂದ ಹಾರ ಹಾಕಿಸಿಕೊಂಡ ಸಿದ್ದರಾಮಯ್ಯ

ಚಾಮರಾಜನಗರ: ಮುಖ್ಯಮಂತ್ರಿಯನ್ನು ಕಾಣಬೇಕು, ಅವರೊಂದಿಗೆ ಮಾತನಾಡಬೇಕು ಎಂದು ಅಳುತ್ತಿದ್ದ ಬಾಲಕಿಯೊಬ್ಬಳನ್ನು ಕಂಡು, ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ ಸಿದ್ದರಾಮಯ್ಯ ಆಕೆಯಿಂದ ಹಾರ ಹಾಕಿಸಿಕೊಂಡು, ತಲೆ ಸವರಿ ಆರ್ಶೀವಾದ ಮಾಡಿ ಚೆನ್ನಾಗಿ ಓದುವಂತೆ ತಿಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.
ಹನೂರು ಪಟ್ಟಣದಲ್ಲಿ ಪ್ರಜಾಸೌಧಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವವರಿದ್ದರು. ಆ ಸ್ಥಳದಲ್ಲಿ ಹನೂರು ಪಟ್ಟಣದ 9ನೇ ತರಗತಿಯ ವಿದ್ಯಾರ್ಥಿನಿ ಮರೀಹಾ ಎಂಬ ಬಾಲಕಿ ಮುಖ್ಯಮಂತ್ರಿಯನ್ನುಕಾಣಬೇಕೆಂಬ ಕಾತುರದಿಂದ ಬಿಸಿಲಿನಲ್ಲಿ ನಿಂತಿದ್ದಳು. ಸ್ಥಳಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಬಾಲಕಿಯನ್ನುಗಮನಿಸಿ ಬಳಿಗೆ ಕರೆಸಿ ಆಕೆಯಿಂದ ಹಾರ ಹಾಕಿಸಿಕೊಂಡರು. ಬಳಿಕ ಕೈಕುಲುಕಿ ಆಶೀರ್ವದಿಸಿದರು.
Next Story