ಕೊಳ್ಳೇಗಾಲ | ತಾಯಿ ಎದುರೇ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟ ಮಗ

ಚಾಮರಾಜನಗರ : ಹೈಟೆನ್ಷನ್ ವಿದ್ಯುತ್ ಕಂಬ ಏರಿ ಯುವಕನೋರ್ವ ಪ್ರಾಣ ಬಿಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನೆಡೆದಿದೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ ಮೃತ ಯುವಕ.
ಮಂಗಳವಾರ ಬೆಳ್ಳಗ್ಗೆ 9ರ ವೇಳೆ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಕಂಡ ಸ್ಥಳೀಯರು ಇಳಿಯುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಈ ವೇಳೆ ತಾಯಿಯೂ ಕೂಡ ಇಳಿಯುವಂತೆ ಹೇಳಿದಾಗ ನಂತರ ಆತ ಇಳಿಯುತ್ತದ್ದಂತೆ ಆಯತಪ್ಪಿ ವಿದ್ಯುತ್ ವೈರ್ ಗೆ ತಗುಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯುತ್ ಕಂಬ ಏರಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
Next Story