ಕೊಳ್ಳೇಗಾಲ | ಆಹಾರದಲ್ಲಿ ಇರಿಸಿದ್ದ ಸಿಡಿಮದ್ದು ಸ್ಫೋಟಗೊಂಡು ಕರಡಿ ಸಾವು

ಕೊಳ್ಳೇಗಾಲ : ಕಾಡುಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಸಿಡಿದು ಕರಡಿಯ ಬಾಯಿ ಛಿದ್ರಗೊಂಡು ಮೃತಪಟ್ಟಿರುವ ಘಟನೆಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಬಳಿ ನಡೆದಿದೆ.
ಕಾಡಿನಿಂದ ಮೇವು ಹಾಗೂ ನೀರು ಅರಸಿ ನಾಡಿನತ್ತ ಬಂದಿದ್ದ ಕರಡಿಯೊಂದು ತೆಳ್ಳನೂರಿನ ಆರಣ್ಯ ಪ್ರದೇಶದ ಸಮೀಪದಲ್ಲಿರುವ ಜಮೀನುಗಳ ರಸ್ತೆಯಲ್ಲಿ ತೆರಳುತ್ತಿದ್ದಾಗ ಆಹಾರದ ಜೊತೆ ಇದ್ದ ಸ್ಪೋಟಕಕ್ಕೆ ಬಾಯಿ ಹಾಕಿ ತಿನ್ನಲು ಮುಂದಾಗಿದೆ.
ಈ ವೇಳೆ ಸ್ಫೋಟಕ ಸಿಡಿದು ಕರಡಿಯ ಬಾಯಿ ಛಿದ್ರಗೊಂಡಿದ್ದು, ಕೆಲಕಾಲ ಕರಡಿ ನರಳಾಡಿ ಮೃತಪಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
Next Story