ಚಾಮರಾಜನಗರ | ಟಿಟಿ ವಾಹನ-ಕಾರು ನಡುವೆ ಢಿಕ್ಕಿ : ಕೇರಳ ಮೂಲದ ಇಬ್ಬರು ಮೃತ್ಯು

ಶಾಷಿದ್ (30), ಮುಷ್ಕಾನ್ (19)
ಚಾಮರಾಜನಗರ: ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕೇರಳ ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766ರ ಬೆಂಡಗಳ್ಳಿ ಗೇಟ್ ಸಮೀಪದಲ್ಲಿ ನಡೆದಿದೆ.
ರಸ್ತೆಅಪಘಾತದಲ್ಲಿ ಕೇರಳ ಮೂಲದ ಶಾಷಿದ್ (30), ಮುಷ್ಕಾನ್ (19) ಮೃತರಾಗಿದ್ದಾರೆ. ಶಾಜೀಯಾ ಎಂಬುವವರಿಗೆ ತೀವ್ರ ಪೆಟ್ಟಾಗಿದ್ದು ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ.
ನಂಜನಗೂಡಿನಿಂದ ಊಟಿಗೆ ತೆರಳುತ್ತಿದ್ದ ಟಿಟಿ ವಾಹನ ಹಾಗೂ ಮೈಸೂರು ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಕಾರಿನಲ್ಲಿ ಕೇರಳ ಮೂಲದ ಒಂದೇ ಕುಟುಂಬದ 8 ಮಂದಿ ಮಕ್ಕಳೊಡನೆ ಹೋಗುತ್ತಿದ್ದರು ಎನ್ನಲಾಗುತ್ತಿದ್ದು, ಇದರಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇನ್ನೂ ಟಿಟಿ ಯಲ್ಲಿ ತೆರಳುತ್ತಿದ್ದ ಚಾಲಕ ಸೇರಿ ಸುಮಾರು 5-6 ಮಂದಿಗೆ ಗಾಯಗಳಾಗಿದೆ ಎನ್ನಲಾಗುತ್ತಿದೆ.
ಅಪಘಾತ ನಡೆದ ಕೂಡಲೇ ಬೇಗೂರು ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹ ಹಾಗೂ ಗಾಯಾಳುಗಳನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಿ ಎರಡು ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.