ಚಾಮರಾಜನಗರ | ಭರಚುಕ್ಕಿ ಜಲಪಾತದ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ: ಪೊಲೀಸರಿಂದ ಯುವಕರಿಗೆ ಬಸ್ಕಿ ಶಿಕ್ಷೆ!
ಚಾಮರಾಜನಗರ, ಜು.31: ಕೊಳ್ಳೇಗಾಲದ ಭರಚುಕ್ಕಿ ಜಲಪಾತದ ಅಪಾಯಕಾರಿ ಸ್ಥಳವಾದ ಬುದೂಗಟ್ಟೆ ದೊಡ್ಡಿಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿ ಶಿಸ್ತಿನ ಪಾಠ ಕಲಿಸಿದ್ದಾರೆ.
ಭರಚುಕ್ಕಿ ಜಲಪಾತದ ಅಪಾಯಕಾರಿ ಸ್ಥಳವಾದ ಬುದೂಗಟ್ಟೆ ದೊಡ್ಡಿಯಲ್ಲಿ ನೀರು ಧುಮ್ಮಿಕ್ಕುವ ಹಿಂಭಾಗಕ್ಕೆ ತೆರಳಿದ್ದ 15ಕ್ಕೂ ಅಧಿಕ ಯುವಕರು ಸೆಲ್ಫಿ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸೆಲ್ಫಿ ತೆಗೆಯುತ್ತಿದ್ದ ಯುವಕರನ್ನು ಕರೆದು ಬಸ್ಕಿ ಹೊಡೆಸಿದ್ದಾರೆ.
ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story