ಚಾಂಪಿಯನ್ಸ್ ಟ್ರೋಫಿ: ದುಬೈನಲ್ಲಿ ಟೀಂ ಇಂಡಿಯಾ ಜೆರ್ಸಿ ಬಿಡುಗಡೆ

PC: x.com/BCCI
ಹೊಸದಿಲ್ಲಿ: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ಕ್ಕೆ ಕ್ಷಣಗಣನೆ ಆರಂವಾಗಿದ್ದು, ಅಧಿಕೃತ ಟೂರ್ನಮೆಂಟ್ ಜೆರ್ಸಿಗಳನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿದೆ.
ಬಿಸಿಸಿಐ ಸಾಮಾಜಿಕ ಜಾಲತಾಣ ಹ್ಯಾಂಡಲ್ ಗಳಲ್ಲಿ ಇದರ ಚಿತ್ರಗಳನ್ನು ಹಂಚಿಕೊಂಡಿದ್ದು, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಮೊಹ್ಮದ್ ಶಮಿಯಂಥ ಪ್ರಮುಖ ಆಟಗಾರರು ಸೆಣಸಾಟಕ್ಕೆ ಸಜ್ಜಾಗಿರುವ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
"ಇದು ಇಂದಿನ ಚಿತ್ರಗಳು, ಎಷ್ಟು ಚೆನ್ನಾಗಿವೆ.." ಎಂಬ ಶೀರ್ಷಿಕೆಯೊಂದಿಗೆ ಬಿಸಿಸಿಐ ಈ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಮುಂಬರುವ ಟೂರ್ನಿಯಲ್ಲಿ ಭಾರತದ ಟ್ರೋಫಿ ಕನಸಿಗೆ ಅಭಿಮಾನಿಗಳ ರೋಮಾಂಚನ ಜೀವ ತುಂಬಿದ್ದು, ಚಿತ್ರಗಳು ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿವೆ.
ಭಾರತ ತಂಡ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಫೆಬ್ರುವರಿ 20ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬದ್ಧ ಎದುರಾಳಿ ಪಾಕಿಸ್ತಾನವನ್ನು ಫೆಬ್ರುವರಿ 23ರಂದು ಎದುರಿಸಲಿದ್ದು, ಮಾರ್ಚ್ 2ರಂದು ನ್ಯೂಝಿಲೆಂಡ್ ವಿರುದ್ಧದ ಪ್ರಮುಖ ಪಂದ್ಯ ಆಡಲಿದೆ. ಹೈಬ್ರೀಡ್ ಮಾದರಿಯಿಂದಾಗಿ ಭಾರತದ ಎಲ್ಲ ಪಂದ್ಯಗಳನ್ನು ಪಾಕಿಸ್ತಾನದ ಬದಲಾಗಿ ದುಬೈನಲ್ಲಿ ಆಡಲಾಗುತ್ತಿದೆ.
ಬೆನ್ನುನೋವಿನ ಕಾರಣದಿಂದ ವೇಗಿ ಜಸ್ಪ್ರೀತ್ ಬೂಮ್ರಾ ಅವರ ಸೇವೆ ಭಾರತಕ್ಕೆ ಲಭ್ಯವಿಲ್ಲದಿರುವುದು ತಂಡಕ್ಕೆ ಸವಾಲಾಗಿದೆ. ಪರಿಣಾಮವಾಗಿ ಯುವವೇಗಿ ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
These pics from today
— BCCI (@BCCI) February 17, 2025
How good #TeamIndia | #ChampionsTrophy pic.twitter.com/yM50ArMIj5