ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಧರ್ಮಸ್ಥಳ ಆಣೆ ಪ್ರಮಾಣ ಆಹ್ವಾನಕ್ಕೆ ಸಿ ಟಿ ರವಿ ತಿರುಗೇಟು
ಚಿಕ್ಕಮಗಳೂರು: ಕಾನೂನಾತ್ಮಾಕ ಹಾಗೂ ರಾಜಕೀಯವಾಗಿ ಪ್ರಕರಣ ಮುಗಿದ ಮೇಲೆ ಧರ್ಮಸ್ಥಳ ಕ್ಕೂ ಹೋಗುತ್ತೇನೆ, ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ ಎಂದು ಹೇಳಿರುವ ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಧರ್ಮಸ್ಥಳ ಆಣೆ ಪ್ರಮಾಣ ಆಹ್ವಾನಕ್ಕೆ ತಿರುಗೇಟು ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರವಿ ಅವರು, ನನ್ನನ್ನು ಇಡೀ ಜಿಲ್ಲೆ ಸುತ್ತಿಸುವಾಗ ಯಲ್ಲಮ್ಮ ದೇವಸ್ಥಾನ ಮುಂದೆಯೇ ಕರೆದೊಯ್ದಿದ್ದಾರೆ. ಆಗ ಯಲ್ಲಮ್ಮನ ದೇವಿಯಲ್ಲಿ ಹರಕೆ ಕಟ್ಟಿಕೊಂಡಿದ್ದೇನೆ. ಪ್ರಕರಣ ಮುಗಿದ ಮೇಲೆ ಯಲ್ಲಮ್ಮನ ಬಳಿ ಹೋಗಿ ಹರಕೆ ತಿರಿಸುತ್ತೇನೆ, ಧರ್ಮಸ್ಥಳಕ್ಕೂ ಹೋಗುತ್ತೇನೆ. ಹರಕೆ ಏನು ಕಟ್ಟಿಕೊಂಡಿದ್ದೇನೆ ಎಂದು ಈಗ ಹೇಳಲ್ಲ, ಹರಕೆ ತೀರಿಸಿದ ಮೇಲೆ ಹೇಳುತ್ತೇನೆ ಎಂದರು.
ಖಾನಾಪುರ ಸಿಪಿಐ ಮಂಜುನಾಥ ಅವರನ್ನು ಅಮಾನತ್ತು ಮಾಡಿರುವ ವಿಚಾರ ತಿಳಿದಿಲ್ಲ. ಸಿಪಿಐ ಅಮಾನತ್ತು ಮಾಡುವುದಲ್ಲ ಕಮಿಷನರ್ ,ಎಸ್ ಪಿ, ಪ್ರಕರಣಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ಆಗಬೇಕು. ನಾನು ನೀಡಿದ ಕಂಪ್ಲೆಟ್ ರಿಜಿಸ್ಟರ್ ಆಗಬೇಕು ಎಂದು ಆಗ್ರಹಿಸಿದರು.