ಚಿಕ್ಕಮಗಳೂರು | ಉಕ್ಕಿ ಹರಿಯುತ್ತಿರುವ ಭದ್ರಾ ನದಿ : ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆ
ಹೆಬ್ಬಾಳೆ ಸೇತುವೆ
ಚಿಕ್ಕಮಗಳೂರು : ಮಲೆನಾಡಿನಲ್ಲಿ ಬಿಡುವು ನೀಡಿದ್ದ ಮಳೆ ಮತ್ತೆ ಆರ್ಭಟಿಸುತ್ತಿದ್ದು, ಭಾರೀ ಮಳೆಗೆ ಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದೆ. ಭದ್ರಾ ನದಿಯಲ್ಲಿರುವ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ಸಂಪರ್ಕ ಮತ್ತೆ ಕಡಿತಗೊಂಡಿದೆ.
ಈ ಮಳೆಗಾಲದಲ್ಲಿ ಹೆಬ್ಬಾಳೆ ಸೇತುವ 4ನೇ ಬಾರಿ ಮುಳುಗಿದೆ. ತುಂಗಾ, ಹೇಮಾವತಿ ನದಿಗಳೂ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಹೊಲ ಮತ್ತು ಗದ್ದೆಗಳಿಗೆ ನದಿ ನೀರು ನುಗ್ಗಿದೆ. ಇನ್ನು ಮಲೆನಾಡು ಬಾಗದಲ್ಲಿ ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದ್ದು ಮರಗಳು ಧರಾಶಾಹಿಯಾಗುತ್ತಿವೆ.
ಮತ್ತೊಂದೆಡೆ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಮೆಸ್ಕಾಂಗೆ ಭಾರೀ ನಷ್ಟವಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಬಯಲು ಭಾಗದಲ್ಲು ಮಳೆ ಬಿರುಸುಗೊಂಡಿದ್ದು, ಮಳೆ ಗಾಳಿ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.
Next Story