ಚಿಕ್ಕಮಗಳೂರು: ಗಂಧದ ಮರ ಕಡಿಯುತ್ತಿದ್ದ ದಂಪತಿ ಬಂಧನ

ಚಿಕ್ಕಮಗಳೂರು: ಗಂಧದ ಮರ ಕಡಿಯುತ್ತಿದ್ದ ದಂಪತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಮೀಸಲು ಅರಣ್ಯದಲ್ಲಿ ನಡೆದಿದೆ.
ಸೆಲ್ವಿ ಮತ್ತು ಬಾಲಕೃಷ್ಣ ಬಂಧಿತ ದಂಪತಿ ಎಂದು ತಿಳಿದು ಬಂದಿದೆ. ಕಾಡಿನಲ್ಲಿ ಗಂಧದ ಮರ ಕಡಿಯುವಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಸೆಲ್ವಿ ಆರೋಪಿಗಳಿಂದ 6 ಕೆಜಿ ಗಂಧದ ತುಂಡು, 4 ಕೆಜಿ ಗಂಧದ ಚಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಅರಣ್ಯ ಇಲಾಖೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Next Story