ಚಿಕ್ಕಮಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು
ಸಾಂದರ್ಭಿಕ ಚಿತ್ರ (Photo: timesnownews.com)
ಚಿಕ್ಕಮಗಳೂರು: ಒಂದುವರೆ ವರ್ಷದ ಮಗುವೊಂದು ನೀರು ತುಂಬಿರುವ ಬಕೆಟ್ ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಎನ್.ಆರ್.ಪುರ ತಾಲೂಕಿನ ರಾವೂರು ಮೀನು ಕ್ಯಾಂಪ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಆನಂದ್ ಹಾಗೂ ಅನು ಎಂಬ ದಂಪತಿಯ ಮಗು ಮೃತಪಟ್ಟಿದೆ.
ಗುರುವಾರ ಸಂಜೆ ತಾಯಿ ಅನು ಬಟ್ಟೆ ತೊಳೆಯುತ್ತಿದ್ದ ವೇಳೆಯಲ್ಲಿ ಹತ್ತಿರದಲ್ಲಿದ್ದ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
Next Story