ಅಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ: ವ್ಯಾಪಕ ಕೃಷಿ ಹಾನಿ
ಚಿಕ್ಕಮಗಳೂರು, ಅ.9: ಅಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕೃಷಿಗೆ ಹಾನಿಯುಂಟು ಮಾಡುತ್ತಿದೆ.
ಏಳರಷ್ಟಿರುವ ಕಾಡಾನೆಗಳ ಹಿಂಡು ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದಲ್ಲಿ ಬೀಡುಬಿಟ್ಟಿವೆ.
ಅರೇನೂರು, ಕಣತಿ, ಬೆಟ್ಟದಮರಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೋಟಗಳಿಗೆ ನುಗ್ಗುವ ಆನೆಗಳು ನಿರಂತರವಾಗಿ ಕಾಫಿ, ಭತ್ತದ ಗದ್ದೆಯನ್ನು ನಾಶ ಮಾಡುತ್ತಿವೆ. ಇದು ಕೃಷಿಕರನ್ನು ಆತಂಕಕ್ಕೀಡು ಮಾಡಿದ್ದು, ಆನೆಗಳ ಹಿಂಡನ್ನು ಕಾಡಿಗೆ ಓಡಿಸುವಂತೆ ಒತ್ತಾಯಿಸುತ್ತಿದ್ದಾರೆ.
Next Story