ಅಕ್ರಮ ಭೂಮಂಜೂರಾತಿ : ಕಡೂರು ತಹಶೀಲ್ದಾರ್ ಅಮಾನತು
ಸಿ.ಎಸ್. ಪೂರ್ಣಿಮಾ
ಕಡೂರು : ಜಮೀನು ಮಂಜೂರಾತಿಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರನ್ನು ಅಮಾನತು ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪೂರ್ಣಿಮಾ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುವ ಸಮಯದಲ್ಲಿ ಅರಣ್ಯಕ್ಕೆ ಸಂಬಂಧಪಟ್ಟ ಜಮೀನನ್ನು ಸರಕಾರದ ಪೂರ್ವನುಮತಿಯಿಲ್ಲದೆ ಅಕ್ರಮವಾಗಿ ಮಂಜೂರಾತಿ ಮಾಡಿರುವ ಆರೋಪದಡಿ ಅವರನ್ನು ಅಮಾನತು ಮಾಡಲಾಗಿದೆ.
ಅಮಾನತು ಅವಧಿಯಲ್ಲಿ ಕೆಸಿಎಸ್ಆರ್ ನಿಯಮ-98ರನ್ವಯ ನಿಗದಿಪಡಿಸಿರುವ ಜೀವನಧಾರ ಭತ್ಯೆ ಸೆಳೆಯಲು ಅನುವಾಗುವಂತೆ ತಹಶೀಲ್ದಾರ್ ಅವರನ್ನು ಚಾಮರಾಜನಗರ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಹುದ್ದೆಗೆ ವರ್ಗಾಯಿಸಲಾಗಿದೆ.
Next Story