ಕಳಸ: ಹೊರನಾಡು ದೇವಾಲಯಕ್ಕೆ ಕುಟುಂಬಸ್ಥರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ
ಕಳಸ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಕುಟುಂಬಸ್ಥರೊಂದಿಗೆ ಹೊರನಾಡು ಅನ್ನಪೂರ್ಣೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ತಾಯಿ, ಮಗ ಮ್ರಿನಾಲ್ ಹೆಬ್ಬಾಲ್ಕರ್, ಸೊಸೆ ಹಿತಾ ಹೆಬ್ಬಾಲ್ಕರ್, ಮೊಮ್ಮಗಳು ಆಯಿರಾ ಹೆಬ್ಬಾಲ್ಕರ್ ಸೇರಿದಂತೆ ಕುಟುಂಬದ ಹದಿನೈದು ಮಂದಿ ಸದಸ್ಯರ ಜೊತೆ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮೊಮ್ಮಗಳು ಆಯಿರಾಗೆ ದೇವಾಲಯದ ಆವರಣದಲ್ಲಿ ಅನ್ನಪ್ರಾಶನ ನೆರವೇರಿಸಲಾಯಿತು.
ಹೊರನಾಡು ದೇವಾಲಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಅವರು ಕಳಸ ಪಟ್ಟಣದಲ್ಲಿರುವ ಶಾಸಕಿ ನಯನಾ ಮೋಟಮ್ಮ ಅವರ ಶಾಸಕರ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಹೊರನಾಡು ದೇವಾಲಯ ಭೇಟಿ ಬಳಿಕ ಶೃಂಗೇರಿ ದೇವಾಲಯಕ್ಕೆ ತೆರಳಿದರು. ಈ ಸಂಧರ್ಭದಲ್ಲಿ ಕಳಸ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಕಾಂಗ್ರೆಸ್ ಮುಖಂಡರಾದ ಹಿತ್ತಲಮಕ್ಕಿ ರಾಜೇಂದ್ರ, ಸುಧಾಕರ್, ವೀರೇಂದ್ರ, ಸಂಶುದ್ದೀನ್, ಹೊರನಾಡು ಗ್ರಾಪಂ ಅಧ್ಯಕ್ಷ ಮಧುಕುಮಾರ್ ಮತ್ತಿತರರಿದ್ದರು.