ಪ್ರಭಾವಿಗಳಿಂದ ದಲಿತರ ನಿವೇಶನ ಕಬಳಿಸಲು ಹುನ್ನಾರ: ಆರೋಪ
ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ
ಚಿಕ್ಕಮಗಳೂರು: ನಿವೇಶನಕ್ಕಾಗಿ 5 ದಶಕಗಳ ಹಿಂದೆ ಸರಕಾರ ದಲಿತರಿಗೆ ಮಂಜೂರು ಮಾಡಿದ್ದ 10ಗುಂಟೆ ಜಾಗದಲ್ಲಿ 9ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸಮಾಡುತ್ತಿದ್ದು, ಈ ಜಾಗವನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮದೆಂದು ದಲಿತರ ಮನೆಗಳನ್ನು ನೆಲಸಮ ಮಾಡಲು ಮುಂದಾಗಿದ್ದಾರೆ ಎಂದು ವಿವೇಕಾನಂದಸ್ವಾಮಿ ಯುವಕ ಸಂಘದ ಅಧ್ಯಕ್ಷ ರಾಜು ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಜಿಲ್ಲಾಡಳಿತ, ಜನಪ್ರತಿನಿಧಿಗಳೂ ನಮ್ಮ ನೆರವಿಗೆ ಬರುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸದಿದ್ದಲ್ಲಿ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು.
ನಗರದ ಉಪ್ಪಳ್ಳಿ ಬಡಾವಣೆಯ ಎಕೆ ರಸ್ತೆ ಸಮೀಪದ ಸರಕಾರಿ ಜಾಗದಲ್ಲಿ ಕಳೆದ 50ವರ್ಷಗಳಿಂದ ಬೋವಿ ಸಮುದಾಯದ 9ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳ ಪೈಕಿ ಕೆಲವರಿಗೆ ಇಂದಿರಾ ಆಶ್ರಯಮನೆ ಮಂಜೂರಾಗಿದೆ. ಮನೆಗಳ ಖಾತೆಯಾಗಿದ್ದು, ಇಸಿ ಕೂಡ ಲಭ್ಯವಿದೆ. ಈ ಬಡಾವಣೆಗೆ ಸರಕಾರದಿಂದ ವಿದ್ಯುತ್ ಸೌಲಭ್ಯ, ರಸ್ತೆ, ಕುಡಿಯುವ ನೀರಿನ ಬಾವಿ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನೂ ಒದಗಿಸಲಾಗಿದೆ. 1988ರಿಂದ ಇಲ್ಲಿಯವರೆಗೆ ಗ್ರಾಪಂ ಹಾಗೂ ನಗರಸಭೆಗೆ ಪ್ರತೀ ಮನೆಗಳ ಮಾಲಕರು ಕಂದಾಯವನ್ನೂ ಪಾವತಿ ಮಾಡುತ್ತಿದ್ದಾರೆ. ಆದರೆ ಬಡಾವಣೆಯ ಪಕ್ಕದಲ್ಲೇ ಇರುವ ಸ್ಥಳೀಯ ವ್ಯಕ್ತಿಯೊಬ್ಬರು ದಲಿತರ 10ಗುಂಟೆ ನಿವೇಶನ ಜಾಗ ಕಬಳಿಸುವ ಉದ್ದೇಶದಿಂದ ನ್ಯಾಯಾಲಯದ ಮೂಲಕ ಒತ್ತಡ ಹೇರುತ್ತಿದ್ದಾರೆ. ನೋಟಿ ಜಾರಿ ಮಾಡಿ ಮನೆಗಳನ್ನು ನೆಲಸಮ ಮಾಡಲು ಮುಂದಾಗಿದ್ದಾರೆ ಎಂದು ಅಳಲುತೋಡಿಕೊಂಡರು.
ನಮ್ಮ ಬಡಾವಣೆಯ ಪಕ್ಕದ ವ್ಯಕ್ತಿಯೊಬ್ಬರು ಈ ಹಿಂದೆ ನಮ್ಮ ಮನೆಗಳಿರುವ 10ಗುಂಟೆ ಸರಕಾರಿ ಜಾಗದ ಪಕ್ಕದಲ್ಲಿ ಜಮೀನು ಖರೀದಿಸಿದ್ದಾರೆ. ಈ ಜಮೀನನ್ನು ಮಕ್ಕಳಿಗೆ ವಿಭಾಗ ಮಾಡಿದ ಬಳಿಕ ಸದ್ಯ ದಲಿತರು ವಾಸವಿರುವ 10ಗುಂಟೆ ಜಾಗವನ್ನು ಕಬಳಿಸಲು ಹುನ್ನಾರ ಮಾಡಿರುವ ವ್ಯಕ್ತಿಗೆ ನಕ್ಷೆ ಪ್ರಕಾರ 1.12ಗುಂಟೆ ಜಾಗ ಅವರ ತಂದೆಯಿಂದ ಬಂದಿದೆ. ಈ ವ್ಯಕ್ತಿಗೆ ದಲಿತರ ಬಡಾವಣೆ ಪಕ್ಕದಲ್ಲಿ 1.10ಗುಂಟೆ ಜಾಗ ಮಾತ್ರ ಇರುವುದನ್ನು ನ್ಯಾಯಾಲಯದಲ್ಲೂ ದೃಢಪಟ್ಟಿದೆ. 2015ರಲ್ಲಿ ದಾಖಲೆಗಳಲ್ಲಿ ಈ ವ್ಯಕ್ತಿಗೆ 1.10ಎಕರೆ ಜಾಗ ಇದ್ದರೆ, 2016ರಲ್ಲಿ 1.20ಎಕರೆ ಜಾಗ ಎಂದು ದಾಖಲಾತಿಗಳಲ್ಲಿ ದಾಖಲಾಗಿದೆ. ಕಂದಾಯಾಕಾರಿಗಳೂ ಸೇರಿದಂತೆ ಸಂಬಂಧಿಸಿದವರಿಗೆ ಹಣದ ಆಮಿಷವೊಡ್ಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಹೆಚ್ಚುವರಿಯಾಗಿ 10ಗುಂಟೆ ಜಾಗವನ್ನು ದಾಖಲೆಗೆ ಸೇರಿಸಿದ್ದಾರೆ ಎಂದು ಆರೋಪಿಸಿದರು.
ದಲಿತರು ವಾಸವಿರುವ 10ಗುಂಟೆ ಜಾಗ ಉಪ್ಪಳ್ಳಿಯ ಮುಖ್ಯ ರಸ್ತೆ ಪಕ್ಕದಲ್ಲೇ ಇದ್ದು, ಈ ಜಾಗಕ್ಕಿರುವ ಬೆಲೆಯ ಕಾರಣದಿಂದಾಗಿ ಪಕ್ಕದ ಜಮೀನಿನ ಮಾಲಕರು ದಲಿತರ ನಿವೇಶನ ಜಾಗ ಕಬಳಿಸಲು ಅಕಾರಿಗಳ ಸಹಕಾರದೊಂದಿಗೆ ಹುನ್ನಾರ ಮಾಡಿದ್ದಾರೆ. ಇಲ್ಲಿ ಭೋವಿ ಸಮುದಾಯದ 9 ಮನೆಗಳಿದ್ದು, 9 ಮನೆಗಳ ಪೈಕಿ ಒಂದು ಮನೆಯನ್ನು ಹೊರತುಪಡಿಸಿ ಉಳಿದ 8ಮನೆಗಳನ್ನು ನೆಲಸಮ ಮಾಡಲು ನೋಟಿ ನೀಡಿದ್ದಾರೆ. ದಲಿತರಿಗೆ ಈ ಮನೆಗಳ ಹೊರತಾಗಿ ಬೇರೆ ಯಾವುದೇ ಆಸ್ತಿ, ಮನೆ ಇರುವುದಿಲ್ಲ. ಮನೆಗಳನ್ನು ತೆರವು ಮಾಡಿದಲ್ಲಿ ದಲಿತ ಕುಟುಂಬಗಳು ಬೀದಿಪಾಲಾಗಲಿದ್ದು, ಈ ಅನ್ಯಾಯದ ವಿರುದ ಸಂಬಂಸಿದ ಅಕಾರಿಗಳು, ಜನಪ್ರತಿನಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥರಾದ ಸ್ವಾಮಿ, ಚೇತನ್‍ಕುಮಾರ್, ಸೆಗಾಯ್‍ದಾಸ್, ಟಿ.ಕೆ.ಬಾಬು, ಜಯಮ್ಮ, ವಸಂತ, ಸುಶೀಲಾ, ಜಯಮ್ಮ ಗೋವಿಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.