ಚಿಕ್ಕಮಗಳೂರು: ನಕ್ಸಲ್ ಆರೋಪಿತರ ಪ್ರಕರಣಗಳು ಖುಲಾಸೆ
ನೀಲಗುಳಿ ಪದ್ಮನಾಭ
ಚಿಕ್ಕಮಗಳೂರು : ಕೆಲ ವರ್ಷಗಳ ಹಿಂದೆ ನಕ್ಸಲ್ ನಿಗ್ರಹಪಡೆ ನಡೆಸಿದ ಬರ್ಕಣ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರು ಜಿಲ್ಲೆಯ ಕೊಪ್ಪ ತಾಲೂಕಿನ ನೀಲಗುಳಿ ಪದ್ಮನಾಭ ಸೇರಿದಂತೆ ರಿಜ್ವಾನಬೇಗಂ ಅವರ ಮೇಲೆ ಜಿಲ್ಲೆಯಲ್ಲಿದ್ದ ತಲಾ 1 ಪ್ರಕರಣ ಮತ್ತು ಬಿ.ಜಿ.ಕೃಷ್ಣಮೂರ್ತಿ ಮೇಲಿನ 1 ಮೊಕದ್ದಮೆಗಳನ್ನು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಖುಲಾಸೆಗೊಳಿಸಿದೆ.
ಇದರೊಂದಿಗೆ ನೀಲಗುಳಿ ಪದ್ಮನಾಭ ಮೇಲೆ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿದ್ದು, 9 ಪ್ರಕರಣಗಳಿಂದ ಅವರನ್ನು ಈಗಾಗಲೇ ಖುಲಾಸೆಗೊಳಿಸಲಾಗಿತ್ತು. ಕೊನೆ ಪ್ರಕರಣದಲ್ಲೂ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದ್ದು, ಈ ಮೂಲಕ ನೀಲಗುಳಿ ಪದ್ಮನಾಭ ಅವರ ಮೇಲಿದ್ದ ಎಲ್ಲ 10 ಪ್ರಕರಣಗಳು ಖುಲಾಸೆಗೊಂಡಂತಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಕೆಲ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.
ಇನ್ನು ರಿಜ್ವಾನ ಬೇಗಂ ಅವರ ಮೇಲಿದ್ದ 1 ಪ್ರಕರಣವನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದರೆ, ಬಿ.ಜಿ.ಕೃಷ್ಣಮೂರ್ತಿ ಅವರ ಮೇಲಿರುವ 40ಕ್ಕೂ ಹೆಚ್ಚು ಪ್ರಕರಣಗಳ ಪೈಕಿ 1ಪ್ರಕರಣವನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾಗಿದ್ದ ಈ ಪ್ರಕರಣದಲ್ಲಿ ನಕ್ಸಲ್ ಆರೋಪಿತರ ಪರವಾಗಿ ಜಿಲ್ಲೆಯ ಹಿರಿಯ ನ್ಯಾಯವಾದಿಗಳಾದ ಲಕ್ಷ್ಮಣ್ಗೌಡ ವಾದ ಮಂಡಿಸಿದ್ದರು. ಲಕ್ಷ್ಮಣ್ಗೌಡ ಅವರನ್ನು ಮಂಗಳವಾರ ನೀಲಗುಳಿ ಪದ್ಮನಾಭ ಅವರು ಅಭಿನಂದಿಸಿದ್ದಾರೆ.