ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ಸಹೋದರ ಬಿ.ಎ.ಇಸ್ಮಾಯೀಲ್ ನಿಧನ
ಬಿ.ಎ.ಇಸ್ಮಾಯೀಲ್
ಚಿಕ್ಕಮಗಳೂರು, ಜ.10: ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರ ಸಹೋದರ ಹಾಗೂ ಹೊಟೇಲ್ ಉದ್ಯಮಿ ಬಿ.ಎ.ಇಸ್ಮಾಯೀಲ್ (73) ಅವರು ಶುಕ್ರವಾರ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇಸ್ಮಾಯೀಲ್ ಅವರು ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು, ಶನಿವಾರ ಬೆಳಗ್ಗೆ 11ಕ್ಕೆ ನಗರದ ರಾಮನಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಅವರ ಪುತ್ರ ರಾಹಿಲ್ ಖಾದರ್ ತಿಳಿಸಿದ್ದಾರೆ.
ಇಸ್ಮಾಯೀಲ್ ಅವರು ಅಬ್ದುಲ್ ಖಾದರ್ ಹಾಗೂ ಹಲೀಮಾ ದಂಪತಿಯ ಐವರು ಮಕ್ಕಳಲ್ಲಿ ಕೊನೆಯವರಾಗಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರು, ಕೆಲ ವರ್ಷಗಳ ಹಿಂದೆ ನಿಲ್ಲಿಸಿದ್ದರು. ಅವರ ಹಿರಿಯ ಸಹೋದರ ಬಿ.ಎ.ಮೊಹಿದಿನ್ ಈ ಹಿಂದೆ ಬಂಟ್ವಾಳ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story