ಚಿಕ್ಕಮಗಳೂರು: ನಾಯಿಯನ್ನು ನುಂಗಿ ನರಳುತ್ತಿದ್ದ 15 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ
ಚಿಕ್ಕಮಗಳೂರು , ಜು.9: ನಾಯಿಯನ್ನು ನುಂಗಿ ನರಳುತ್ತಿದ್ದ ಬೃಹತ್ ಹೆಬ್ಬಾವುವೊಂದನ್ನು ಉರಗತಜ್ಞರೊಬ್ಬರು ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಘಟನೆ ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದಿಂದ ವರದಿಯಾಗಿದೆ.
ಹಂತುವಾನಿ ಗ್ರಾಮದ ಶ್ರೀಮತಿ ಎಂಬವರ ಮನೆ ಪಕ್ಕದಲ್ಲಿ 15 ಅಡಿ ಉದ್ದ, 60 ಕೆ.ಜಿ. ತೂಕದ ಹೆಬ್ಬಾವು ಕಾಣಿಸಿಕೊಂಡಿತ್ತು. ನಾಯಿಯನ್ನು ನುಂಗಿದ್ದರಿಂದ ಸಂಚರಿಸಲಾಗದ ಹಾವು ನರಳಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಉರಗತಜ್ಞ ಹರೀಂದ್ರ ಎಂಬವರು ಸ್ಥಳಕ್ಕೆ ಆಗಮಿಸಿದರು. ಅರಣ್ಯ ಅಧಿಕಾರಿ ರಾಘವೇಂದ್ರ ಸಮ್ಮುಖದಲ್ಲಿ ಹೆಬ್ಬಾವನ್ನು ಸೆರೆ ಹಿಡಿದ ಹರೀಂದ್ರ ಅದನ್ನು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟರು.
Next Story