‘ಗೋಲ್ಗಪ್ಪಾ’ ತಿಂದ ಬಳಿಕ 40 ಮಕ್ಕಳು,10 ಮಹಿಳೆಯರು ಅಸ್ವಸ್ಥ
ಸಾಂದರ್ಭಿಕ ಚಿತ್ರ Photo- PTI
40 children and 10 women are sick after eating 'Golgappa'
ಕೊಡೆರ್ಮಾ: ಬೀದಿಬದಿಯ ಮಾರಾಟಗಾರನಿಂದ ಗೋಲ್ಗಪ್ಪಾ ತಿಂದ ಬಳಿಕ 40 ಮಕ್ಕಳು ಮತ್ತು 10 ಮಹಿಳೆಯರು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಸಂಜೆ ಇಲ್ಲಿಯ ಲೋಕಾಯಿ ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಗೋಲ್ಗಪ್ಪಾ ತಿಂದ ಬಳಿಕ ಮಕ್ಕಳು ಮತ್ತು ಮಹಿಳೆಯರಲ್ಲಿ ವಾಂತಿ ಮತ್ತು ಬೇಧಿಯಂತಹ ತೊಂದರೆಗಳು ಕಾಣಿಸಿಕೊಂಡಿದ್ದು,ವೈದ್ಯಕೀಯ ತಪಾಸಣೆಯಿಂದ ಬ್ಯಾಕ್ಟೀರಿಯಾ ಸೋಂಕಿಗೆ ಒಳಪಟ್ಟಿದ್ದು ದೃಢಗೊಂಡಿದೆ. ಅವರನ್ನು ತಕ್ಷಣ ಕೊಡೆರ್ಮಾದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅಲ್ಲಿ ಅವರನ್ನು ನಿರೀಕ್ಷಣೆಯಲ್ಲಿ ಇರಿಸಲಾಗಿದೆ.
ಮಕ್ಕಳು 9ರಿಂದ 15 ವರ್ಷ ವಯೋಮಾನದವರಾಗಿದ್ದು,ಅವರ ದೇಹಸ್ಥಿತಿ ಸ್ಥಿರವಾಗಿದೆ. ಮಾರಾಟಗಾರನ ಬಳಿ ಬಾಕಿಯಿದ್ದ ಗೋಲ್ಗಪ್ಪಾವನ್ನು ವಶಪಡಿಸಿಕೊಳ್ಳಲಾಗಿದ್ದು,ಪರೀಕ್ಷೆಗಾಗಿ ರಾಂಚಿಗೆ ರವಾನಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಶನಿವಾರ ತಿಳಿಸಿದರು.
Next Story