ಚಿತ್ರದುರ್ಗ | ಆಶ್ರಮದ ಸಂಪಿನಲ್ಲಿ ತಾಯಿ, ಮಗಳ ಮೃತದೇಹ ಪತ್ತೆ
ಚಿತ್ರದುರ್ಗ : ಸಂಪಿಯಲ್ಲಿ ತಾಯಿ ಮತ್ತು ಮಗಳ ಮೃತದೇಹ ಪತ್ತೆಯಾಗಿರುವ ಘಟನೆ ತುರುವನೂರು ರಸ್ತೆಯ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ವರದಿಯಾಗಿದೆ.
ಮೃತರನ್ನು ಭದ್ರಾವತಿಯ ಗೀತಾ (40) ಹಾಗೂ ಪ್ರಿಯಾಂಕಾ (22) ಗುರುತಿಸಲಾಗಿದ್ದು, ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಪೂಜೆ ಮಾಡಿಕೊಂಡು ಆಶ್ರಮದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಗೀತಾ ಅವರು ಆಶ್ರಮದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಮಂಗಳವಾರ ಸಂಜೆ ಪತಿ ಮತ್ತು ಮಗ ಆಶ್ರಮದಿಂದ ಹೊರಹೋಗಿದ್ದರು. ರಾತ್ರಿ ಆಶ್ರಮಕ್ಕೆ ಮರಳಿದಾಗ ಇಬ್ಬರು ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಬಡಾವಣೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
Next Story