ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸಿಲ್ಲ: ಬಿಜೆಪಿ ಸಂಸದ, ನಟ ಸನ್ನಿ ಡಿಯೋಲ್
ಬಿಜೆಪಿ ಸಂಸದ ಸನ್ನಿ ಡಿಯೋಲ್ (PTI)
ಹೊಸದಿಲ್ಲಿ: ತಾನು ಇನ್ನು ಮುಂದೆ ಯಾವುದೇ ಚುನಾವಣೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಬಾಲಿವುಡ್ ನಟ ಹಾಗೂ ಗುರುದಾಸಪುರ್ ಸಂಸದ ಸನ್ನಿ ಡಿಯೋಲ್ ಹೇಳಿದ್ದಾರೆ.
ಹಿಂದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ಲೋಕಸಭೆಯಲ್ಲಿ ಸನ್ನಿ ಅವರ ಕಡಿಮೆ ಹಾಜರಾತಿ ಬಗ್ಗೆ ಪ್ರಶ್ನಿಸಿದಾಗ ಅವರು ಸದನದಲ್ಲಿ ಸಂಸದರ ವರ್ತನೆಯನ್ನು ಪ್ರಶ್ನಿಸಿದರು.
“ಸದ್ಯಕ್ಕೆ ಯಾವುದೇ ಚುನಾವಣೆ ಸ್ಪರ್ಧಿಸಲು ಬಯಸುವುದಿಲ್ಲ. ನನ್ನ ಚುನಾವ್ (ಚುನಾವಣೆ) ಒಬ್ಬ ನಟನಾಗಿ ಎಂದು ನನಗೆ ಅನಿಸುತ್ತದೆ ಹಾಗೂ ಒಬ್ಬ ನಟನಾಗಿ ನನಗೆ ದೇಶ ಸೇವೆ ಮಾಡಬಹುದು, ಇದನ್ನು ಮಾಡುತ್ತಾ ಬಂದಿದ್ದೇನೆ. ಈ ದೇಶದ ಯುವಜನತೆ, ಈ ದೇಶಕ್ಕೆ ಒಬ್ಬ ಒಳ್ಳೆ ನಟನಾಗಿ ಒಳ್ಳೆಯ ಪ್ರಾಜೆಕ್ಟ್ಗಳನ್ನು ನೀಡುವ ವಿಶ್ವಾಸ ಹೊಂದಿದ್ದೇನೆ,” ಎಂದು ಅವರು ಹೇಳಿದರು.
“ನನಗೆ ಯಾವುದು ಸಾಧ್ಯವಿಲ್ಲವೋ, ಅದನ್ನು ಇನ್ನು ಮುಂದೆ ಹಾಗೂ ಭವಿಷ್ಯದಲ್ಲಿ ಮಾಡಲು ಬಯಸುವುದಿಲ್ಲ, ಇದು ನನ್ನ ಇಚ್ಛೆ,” ಎಂದು ಅವರು ಹೇಳಿದರು. ಚುನಾವಣೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
“ನನಗನಿಸುತ್ತದೆ ಅದು (ರಾಜಕೀಯ) ನನ್ನ ಕುಟುಂಬಕ್ಕೆ ಹೊಂದಿಕೆಯಾಗುತ್ತಿಲ್ಲ,” ಎಂದು ಹೇಳಿದರು ಹಾಗೂ ತಮ್ಮ ತಂದೆ, ನಟ ಧರ್ಮೇಂದ್ರ ಅವರು 2004 ಲೋಕಸಭಾ ಚುನಾವಣೆಯಲ್ಲಿ ಬಿಕಾನೇರ್ ಕ್ಷೇತ್ರದಿಂದ ಗೆದ್ದಿದ್ದನ್ನು ನೆನಪಿಸಿಕೊಂಡರು.
ಲೋಕಸಭೆಯಲ್ಲಿ ಕಡಿಮೆ ಹಾಜರಾತಿ ಬಗ್ಗೆ ಪ್ರಶ್ನಿಸಿದಾಗ, “ಇದು ಹಾಜರಾತಿ ಬಗ್ಗೆ ಅಲ್ಲ., ನಾನಲ್ಲಿಗೆ ಹೋದಾಗ ಹಾಗೂ ಅಲ್ಲಿ (ಲೋಕಸಭೆ) ಕುಳಿತು ದೇಶವನ್ನು ನಡೆಸುವ, ಎಲ್ಲಾ ಪಕ್ಷಗಳ ಜನರನ್ನು ನೋಡಿದಾಗ, ಅವರು ಹೇಗೆ ವರ್ತಿಸುತ್ತಾರೆ? ಅವರನ್ನು ನೋಡಿದಾಗ ನಾನು ಅವರಂತೆ ಅಲ್ಲ ಅನಿಸುತ್ತದೆ, ಎಲ್ಲಿಗಾದರೂ ಹೋಗಿ ನನಗಿಷ್ಟವಾದುದನ್ನು ಮಾಡಿ ಆನಂದಿಸಬೇಕೆಂದು ಅನಿಸುತ್ತದೆ,” ಎಂದು ಅವರು ಹೇಳಿದರು.