ಸಿನಿಮಾ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆ
ಬೆಂಗಳೂರು: ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿ ನಿರ್ದೇಶಕ ವಿನೋದ್ ದೊಂಡಾಲೆ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗರಬಾವಿಯ ಅವರ ನಿವಾಸದಲ್ಲಿ ವರದಿಯಾಗಿದೆ.
ವಿನೋದ್ ದೊಂಡಾಲೆ ಅವರು ಹಣಕಾಸಿನ ವಿಚಾರಕ್ಕೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಸಿನಿಮಾವನ್ನು ವಿನೋದ್ ನಿರ್ದೇಶನ ಮಾಡುತ್ತಿದ್ದರು. ವಿನೋದ್, ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಟಿ.ಎನ್.ಸೀತಾರಾಮ್ ಗರಡಿಯಲ್ಲಿ ಪಳಗಿದ್ದ ನಿರ್ದೇಶಕರಾಗಿದ್ದು, ಈ ಇಬ್ಬರಿಗೂ ಸಹ ಸಹಾಯಕ ನಿರ್ದೇಶಕನಾಗಿ ವಿನೋದ್ ಕೆಲಸ ಮಾಡಿದ್ದರು.
Next Story