2025ರ ಆಸ್ಕರ್ ಸ್ಪರ್ಧೆಯಲ್ಲಿ ಭಾರತದಿಂದ ʼಲಾಪತಾ ಲೇಡೀಸ್ʼ
ಹೊಸದಿಲ್ಲಿ: 2025ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ʼಲಾಪತಾ ಲೇಡೀಸ್ʼ ಚಿತ್ರ ನಾಮಿನೇಟ್ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಜಾನು ಬರುವಾ ಈ ಕುರಿತು ಮಾಹಿತಿಯನ್ನು ನೀಡಿದ್ದು, 12 ಹಿಂದಿ ಚಿತ್ರಗಳು, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳನ್ನು ಪರಿಶೀಲಿಸಿ ಕೊನೆಗೆ ʼಲಾಪತಾ ಲೇಡೀಸ್ʼ ಚಿತ್ರವನ್ನು ತೀರ್ಪುಗಾರರು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಲಾಪತಾ ಲೇಡೀಸ್ ಚಿತ್ರವನ್ನು ಕಿರಣ್ ರಾವ್ ನಿರ್ದೇಶಿಸಿದ್ದು, ಆಮಿರ್ ಖಾನ್, ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿತ್ತು. ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ್, ಛಾಯಾ ಕದಂ, ರವಿ ಕಿಶನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Next Story