Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ನಾಲ್ಕೂವರೆ ದಶಕ ಒಂದೇ ಕಂಪೆನಿಯಲ್ಲಿ...

ನಾಲ್ಕೂವರೆ ದಶಕ ಒಂದೇ ಕಂಪೆನಿಯಲ್ಲಿ ದುಡಿದು ತಾಯ್ನಾಡಿಗೆ ಮರಳಿದ ಸಮುದಾಯ ಚಿಂತಕ

ಮರಳುನಾಡಿಗೆ ವಿದಾಯ ಹೇಳಿದ ಮಂಗಳೂರ ಪ್ರವಾಸಿ ಸಯ್ಯದ್ ಶಾಹುಲ್ ಹಮೀದ್

ವಾರ್ತಾಭಾರತಿವಾರ್ತಾಭಾರತಿ10 Sept 2023 5:23 PM IST
share
ನಾಲ್ಕೂವರೆ ದಶಕ ಒಂದೇ ಕಂಪೆನಿಯಲ್ಲಿ ದುಡಿದು ತಾಯ್ನಾಡಿಗೆ ಮರಳಿದ ಸಮುದಾಯ ಚಿಂತಕ

ಎಷ್ಟೋ ಮಂದಿ ಉದ್ಯೋಗ ಅರಸುತ್ತಾ ವಿದೇಶಕ್ಕೆ ಹೋಗುತ್ತಾರೆ. ಒಂದೇ ಕಡೆ ನಿಲ್ಲದೇ, ಸಮಾದಾನಗೊಳ್ಳದೇ ಕೆಲಸ ಬದಲಿಸುತ್ತಾ ಊರೂರು, ದೇಶ-ದೇಶ ಅಲೆಯುತ್ತಾರೆ. ಆದರೆ ಇಲ್ಲೊಬ್ಬ ಸಹನಾಶೀಲ ವ್ಯಕ್ತಿ ನಿರಂತರ 45 ವರ್ಷಗಳ ಕಾಲ ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿ ಇದೀಗ ನಿವೃತ್ತರಾಗಿ ರವಿವಾರ (10/09/23) ತಾಯ್ನಾಡು ಮಂಗಳೂರಿಗೆ ಮರಳಿದ್ದಾರೆ.

ಸಯ್ಯದ್ ಶಾಹುಲ್ ಹಮೀದ್..! ಮಂಗಳೂರು ಬಂದರಿನವರು. ಅಜಾನುಬಾಹು ವ್ಯಕ್ತಿತ್ವ. ವಿದ್ಯಾರ್ಥಿ ದೆಸೆಯಲ್ಲೇ ಸಮಾಜ ಹಿತದ ಕನಸು ಕಂಡವರು. ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರು. ಡಿಗ್ರಿ ವಿದ್ಯೆ ಪಡೆದು ವಿದೇಶದ ಕನಸು ಹೊತ್ತು 1979 ರಲ್ಲಿ ವಿಮಾನ ಏರಿದ ಶಾಹುಲ್ ಹಮೀದ್ ಸುದೀರ್ಘ 45 ವರ್ಷ ಒಂದೇ ಕಡೆ ಕೆಲಸ ಮಾಡಿ ನಿಯ್ಯತ್ತು ತೋರಿದ್ದಾರೆ. ಸೌದಿ ಅರೇಬಿಯಾದ "ನಾಗಿ ಗ್ಫೂಪ್ ಆಫ್ ಕಂಪೆನಿ"ಯ ಸಹೋದರ ಸಂಸ್ಥೆ "ಅರೇಬ್ಯನ್ ಫುಡ್ ಸಪ್ಲೈ" ಯಲ್ಲಿ (ಎ.ಎಫ್.ಎಸ್.) 1979 ರಲ್ಲಿ ಸೇರಿದ ಅವರು ವಿವಿಧ ಹುದ್ದೆಗೆ ಭಡ್ತಿ ಹೊಂದಿ 2023ರಲ್ಲಿ ಅದೇ ಕಂಪೆನಿಯ ಫೈನಾನ್ಸ್ ಸೀನಿಯರ್ ಅಧಿಕಾರಿಯಾಗಿ ನಿವೃತ್ತರಾದರು. ಕಂಪೆನಿಯ ರಿಯಾದ್, ಜಿದ್ದಾ, ದಮಾಮ್, ಜುಬೈಲ್ ಘಟಕಗಳಲ್ಲಿ ಕೆಲಸ ಮಾಡಿ ಅಲ್ಲಿನ ಸಹೋದ್ಯೋಗಿಗಳ ಜೊತೆಗೆ ಉತ್ತಮ ಸಂಬಂಧ, ಬಾಂಧವ್ಯವನ್ನು ಬೆಳೆಸಿದ್ದಾರೆ.

ಇಷ್ಟು ಮಾತ್ರವಲ್ಲ, ಅವರು ತಾಯ್ನಾಡ ಶ್ರೇಯೋಭಿವೃದ್ಧಿಗಾಗಿ ನೀಡಿರುವ ಕೊಡುಗೆ ಸ್ಮರಣೀಯ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುವ ಜಮೀಯ್ಯತುಲ್ ಫಲಾಹ್ ಸಂಸ್ಥೆಯಲ್ಲಿ ಕಳೆದ 34 ವರ್ಷಗಳಿಂದ ತೊಡಗಿಸಿಕೊಂಡಿರುವ ಶಾಹುಲ್ ಹಮೀದ್ ಸಂಸ್ಥೆಯ ದಮಾಮ್ ಘಟಕದ ಅಧ್ಯಕ್ಷರಾಗಿ, ಎನ್.ಆರ್.ಸಿ.ಸಿ. ಅಮೀರ್ ಆಗಿ ನಾಡಿನ ಶೈಕ್ಷಣಿಕ ಬೆಳವಣಿಗೆಗೆ ಅಪಾರ ಶ್ರಮವನ್ನು ದಾರೆ ಎರೆದವರು.

ಕಳೆದ 28 ವರ್ಷದಿಂದ ಐ.ಎಂ.ಸಿ.ಸಿ. ಸಂಘಟನೆಯ ಸೌದಿಯ ಸ್ಥಾಪಕ ಸದಸ್ಯರಾಗಿ, ದಮಾಮ್ ಶಾಖೆಯ ಅಧ್ಯಕ್ಷರಾಗಿಯೂ ಶಾಹುಲ್ ಹಮೀದ್ ಕೆಲಸ ಮಾಡಿದ್ದಾರೆ. ಸೌದಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮರ್ಥವಾಗಿ ಗುರುತಿಸಿಕೊಂಡ ಸಯ್ಯದ್ ಶಾಹುಲ್ ಹಮೀದ್ ನಿವೃತ್ತರಾಗಿ ನಾಡಿಗೆ ಮರಳುವಾಗ ಸೌದಿಯ ಹಲವಾರು ಸಂಘ ಸಂಸ್ಥೆಗಳು ಅವರನ್ನು ಅಭಿನಂದಿಸಿ ಬೀಳ್ಕೊಟ್ಟಿವೆ.

ತಾನು ಕೆಲಸ ಮಾಡಿದ ಕಂಪೆನಿಯನ್ನು ಅಭಿಮಾನದಿಂದ ನೆನೆಯುವ ಶಾಹುಲ್ ಹಮೀದ್ "ಅನ್ನ ಕೊಟ್ಟ ಸಂಸ್ಥೆಗೆ ಚಿರಋಣಿಯಾಗಿದ್ದೇನೆ. ಸೌದಿ ನನಗೆ ನೆಲೆ ಕಲ್ಪಿಸಿದೆ. ಉತ್ತಮ ಜೀವನ ನೀಡಿದೆ. ಕಂಪೆನಿಯ ಪ್ರೀತಿಗೆ ತಲೆ ಭಾಗುವೆನು" ಎಂದಿದ್ದಾರೆ.

37 ವರ್ಷಗಳ ಹಿಂದೆ ಮಂಗಳೂರಿನ ಆಯಿಷಾ ಅವರನ್ನು ಮದುವೆಯಾದ ಶಾಹುಲ್ ಹಮೀದ್ ಅವರಿಗೆ 2 ಹೆಣ್ಣು, ಒಂದು ಗಂಡು ಮಕ್ಕಳು. 45 ವರ್ಷಗಳ ಪ್ರವಾಸಿ ಜೀವನದಿಂದ ಊರಿಗೆ ಮರಳಿರುವ ಶಾಹುಲ್ ಹಮೀದ್ ಅವರಿಗೆ ನಿವೃತ್ತಿ ಜೀವನದಲ್ಲೂ ಸಮಾಜ ಸೇವೆಯ ಪ್ರವೃತ್ತಿ ಮುಂದುವರಿಸಬೇಕೆಂಬ ಅದಮ್ಯ ಬಯಕೆ ಇದೆ. ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಸೆ. 11ರ ಬೆಳಿಗ್ಗೆ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಕಾರ್ಯಕ್ರಮದಲ್ಲಿ ಶಾಹುಲ್ ಹಮೀದ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಿದೆ.

-ರಶೀದ್ ವಿಟ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X