ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಮಹಾಸಭೆ
ಅಧ್ಯಕ್ಷರಾಗಿ ಝಕರಿಯಾ ನಾರ್ಶ ಆಯ್ಕೆ
ಬಂಟ್ವಾಳ : ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ರಿ. ಇದರ ಮಹಾಸಭೆಯು ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ದು:ಆ ನೆರವೇರಿಸಿದರು. ವಿಟ್ಲ ಪರ್ತಿಪ್ಪಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಪಿ.ಯಂ ಹಕೀಂ ಪರ್ತಿಪ್ಪಾಡಿಯವರು ಉದ್ಘಾಟಿಸಿದರು.
ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್.ಸುಳ್ಯ , ಇರಾ ಗ್ರಾಮ ಪಂಚಾಯತ್ ಸದಸ್ಯ ರಝಾಕ್ ಕುಕ್ಕಾಜೆ, ಸುಬಾನ್ ಅಹಮದ್ ಹೊನ್ನಾರ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜಿ.ಯಂ ಮಹಮ್ಮದ್ ಕಾಮಿಲ್ ಸಖಾಫಿ ತರಗತಿ ಮಂಡಿಸಿದರು.
ಸಿದ್ದೀಕ್ ಗೂನಡ್ಕ ವರದಿ ವಾಚಿಸಿದರು, ಸಂಚಾಲಕ ಇಬ್ರಾಹೀಂ ಕರೀಂ ಕದ್ಕಾರ್ ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಜಿ.ಯಂ ಮಹಮ್ಮದ್ ಕಾಮಿಲ್ ಸಖಾಫಿ ಉಸ್ತಾದ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಧ್ಯಕ್ಷರಾಗಿ ಎಂ.ಎಸ್ ಮಹಮ್ಮದ್, ಗೌರವ ಸಲಹೆಗಾರರಾಗಿ ಸಯ್ಯಿದ್ ಖುಬೈಬ್ ತಂಙಳ್ ಉಳ್ಳಾಲ, ಮುಸ್ತಾಫ ಜನತಾ ಸುಳ್ಯ, ಅಬ್ದುಲ್ ರಝಾಕ್ ಕುಕ್ಕಾಜೆ, ಪಿ.ಯಂ ಹಕೀಂ ಪರ್ತಿಪ್ಪಾಡಿ ಅವರನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಝಕರಿಯಾ ನಾರ್ಶ, ಉಪಾಧ್ಯಕ್ಷರಾಗಿ ಸಿ.ಹೆಚ್ ಅಬ್ದುಲ್ ರಝಾಕ್, ಸುಬಾನ್ ಅಹಮದ್ ಹೊನ್ನಾರ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ , ಸಂಚಾಲಕರಾಗಿ ಇಬ್ರಾಹೀಂ ಕರೀಂ ಕದ್ಕಾರ್, ಕೋಶಾಧಿಕಾರಿಯಾಗಿ ಲತೀಫ್ ಪರ್ತಿಪ್ಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಉಮ್ಮರ್ ಸುಳ್ಯ , ಸಾಂತ್ವಾನ ಕಾರ್ಯದರ್ಶಿಯಾಗಿ ಅಲ್ತಾಫ್ ಶಾಂತಿಭಾಗ್ , ಲೆಕ್ಕಪರಿಶೋಧಕರಾಗಿ ರಿಝ್ವಾನ್ ಕೃಷ್ಣಾಪುರ,
ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಸಖಾಫಿ ಪಾಣಾಜೆ, ಲತೀಫ್ ಅಜಿಲಮೊಗರು, ಧಾರ್ಮಿಕ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುಬೀನ್ ಉಜಿರೆ, ಮಾದ್ಯಮ ಕಾರ್ಯದರ್ಶಿಯಾಗಿ ಪೈಝಲ್ ಝುಹರಿ ಕಲ್ಲುಗುಂಡಿ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಸಿಫ್ ಕೈೂಲ, ಉಸ್ಮಾನ್ ಕುಕ್ಕಾಜೆ, ಫಯಾಝ್ ಕೊಪ್ಪಳ ಮಂಗಳೂರು, ಸಿದ್ದೀಕ್ ಉಡುಪಿ , ಝೈನುಲ್ ಆಬಿದ್ ಮಡಿಕೇರಿ, ಫಾರೂಕ್ ಮೂಡಿಗೆರೆ, ರಿಯಾಝ್ ನೆಕ್ಕಿಲ, ಹಸೈನಾರ್ ಗುತ್ತಿಗಾರು, ಸ್ವಾಲಿಹ್ ಮುರ, ಮಹಮ್ಮದ್ ಉಳ್ಳಾಲ , ಅಬ್ದುಲ್ಲಾ ನಾರಂಕೋಡಿ, ಕಬೀರ್ ಸುಳ್ಯ , ಸಿದ್ದೀಕ್ ಪರಪ್ಪು , ಇವರನ್ನು ಆಯ್ಕೆ ಮಾಡಲಾಯಿತು.
ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ, ಸಿದ್ದೀಕ್ ಗೂನಡ್ಕ ವಂದಿಸಿದರು.