ವೇಣೂರು: ಚೂರಿ ತೋರಿಸಿ ಜೀವ ಬೆದರಿಕೆ; ಆರೋಪಿ ಆನಂದ ಆಚಾರ್ಯ ಬಂಧನ
ಬೆಳ್ತಂಗಡಿ:ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ಪರಿಸರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಚೂರಿ ತೋರಿಸಿ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಂಡೂರಿನ ಆನಂದ ಆಚಾರ್ಯ (38) ಎಂದು ಗುರುತಿಸಲಾಗಿದೆ. ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಮಂಗಳವಾರ ರಾತ್ರಿ ವಲಯ ಮಟ್ಟದ ಜಿನ ಭಜನಾ ಸ್ಪರ್ದೆಗೆ ಮಹಿಳೆಯರು,ಮಕ್ಕಳು ಸೇರಿ ಸುಮಾರು 70 ಮಂದಿ ಅಭ್ಯಾಸ ನಡೆತ್ತಿದ್ದರು.ಈ ಸಂದರ್ಭ ಅಲ್ಲಿಗೆ ಬಂದ ಈತ ಚೂರಿ ತೋರಿಸಿ, ಬೊಬ್ಬೆ ಹಾಕಿ ಬೆದರಿಕೆ ಹಾಕಿದ್ದು ಕೂಡಲೇ ಸ್ಥಳಿಯರು ವೇಣೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೋಲೀಸರು ಚೂರಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.
Next Story