ಬಂಟ್ವಾಳ: ನಾಯರ್ ಮೂಲೆ ಕುಟುಂಬ ಸಂಗಮ “ಒತ್ತೊರುಮ-2025”

ಬಂಟ್ವಾಳ: ನಾಯರ್ ಮೂಲೆ ಕುಟುಂಬದ ವಾರ್ಷಿಕ ಕುಟುಂಬ ಸಂಗಮ “ಒತ್ತೊರುಮ - 2025” ಕಾರ್ಯಕ್ರಮವು ತಾಲೂಕಿನ ಮಾಣಿಲ ಗ್ರಾಮದ ಮರ್ಹೂಂ ಆಮು ಹಾಜಿ ನಾಯರ್‌ಮೂಲೆ ಅವರ ಮನೆಯಂಗಳದಲ್ಲಿ ನಡೆಯಿತು.
ನಾಯರ್ ಮೂಲೆ ಫ್ಯಾಮಿಲಿ ಅಸೋಸಿಯೇಷನ್ ಆಯೋಜಿಸಿದ್ದ ಕುಟುಂಬ ಸಂಗಮದಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತರುವ ಮೂಲಕ ಪಾರಂಪರಿಕ ಸ್ವಾದದ ಫುಡ್ ಫೆಸ್ಟ್ ಆಯೋಜಿಸಲಾಗಿತ್ತು. ಕುಟುಂಬ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಒಪ್ಪನ, ದಫ್ಫ್, ಹಾಡು, ಡಾನ್ಸ್ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಮಸೀದಿ ನಿರ್ಮಾಣಕ್ಕೆ ಕುಟುಂಬದಿಂದ ಸುಮಾರು 7 ಲಕ್ಷ ರೂಪಾಯಿಯ ಸಹಾಯ ಧನದ ಚೆಕ್ ವಿತರಿಸಲಾಯಿತು.
ನಿವೃತ್ತ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಎಂ ಎನ್, ಕರ್ನಾಟಕದ ಪ್ರಭಾವಿ 100 ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ಡಾ.ಸಲ್ಮಾ ಸುಹಾನಾ, SSLC ಯಲ್ಲಿ ಶೇಕಡಾ 100 ಅಂಕ ಪಡೆದ ಶಾಝಿನ್ ಅಬ್ದುಲ್ ರಝಾಕ್, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್ ಪಡೆದು ಉಚಿತ ಮೆಡಿಕಲ್ ಸೀಟ್ ಗಿಟ್ಟಿಸಿಕೊಂಡ ಖದೀಜ ಸೇರಿದಂತೆ ಕುಟುಂಬದಲ್ಲಿ ಸಾಧನೆ ಮಾಡಿದ ಸುಮಾರು 28 ಮಂದಿಯನ್ನು “ಮರ್ಹೂ ಮೊಯಿದೀನ್ ಕುಟ್ಟಿ ಹಾಜಿ & ಬೀಫಾತಿಮಾ ಹಜ್ಜುಮ್ಮಾ ಲುಮಿನರಿ ಅವಾರ್ಡ್” ಕೊಡುವ ಮುಖಾಂತರ ಸನ್ಮಾನಿಸಲಾಯಿತು.
SSLC -PUC ನಲ್ಲಿ ಶೇಕಡಾ 90 ಕ್ಕೆ ಮೇಲ್ಪಟ್ಟ ಅಂಕ ಪಡೆದವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 70% ಗಿಂತ ಮೇಲ್ಪಟ್ಟ ಅಂಕ ಪಡೆದವರು, ಪೋಸ್ಟ್ ಗ್ರಾಜುವೇಷನ್ ಪೂರ್ತಿ ಮಾಡಿದವರು, ವಿಶೇಷ ಪ್ರಶಸ್ತಿ ಪಡೆದವರು ಎಂಬಿತ್ಯಾದಿ ಅತ್ಯುನ್ನತ ಸಾಧನೆ ಮಾಡಿದವರನ್ನ ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಟುಂಬದ ಹಿರಿಯರಾದ ಕಾಯಿಞ್ಞಿ ಹಾಜಿ, ಕೇಂದ್ರ ಸರಕಾರದ ನಿವೃತ ಅಧಿಕಾರಿ ಇಬ್ರಾಹಿಂ ಹಾಜಿ, ಡಾ.ಉಮರ್, ನಿವೃತ್ತ ಡಿಸ್ಟ್ರಿಕ್ಟ್ ಜಡ್ಜ್ & ಕರ್ನಾಟಕ ಸ್ಟೇಟ್ ಅಡ್ಮಿನಿಸ್ಟ್ರೇಟಿವ್ ಟ್ರೈಬುನಲ್ ನ್ಯಾಯಾಧೀಶರಾದ ಮೂಸಕುಞ್ಞಿ ನಾಯರ್ ಮೂಲೆ ಮತ್ತು ಮರಿಯಮ್ಮ ಹಜ್ಜುಮ್ಮ ಮದನೋಡಿ ಭಾಗವಹಿಸಿದ್ದರು.