ಬೆಳ್ತಂಗಡಿ : ರಸ್ತೆ ಅಫಘಾತ ಪ್ರಕರಣ; ತಲೆಮರೆಸಿಕೊಂಡಿದ್ದ ಲಾರಿ ಚಾಲಕನ ಬಂಧನ

ಬೆಳ್ತಂಗಡಿ : 2006 ರಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತನನ್ನು ಚಾರ್ಮಾಡಿಯ ಸಿದ್ದೀಕ್(40) ಎಂದು ಗುರುತಿಸಲಾಗಿದೆ. ಅಜಾಗರೂಕ ಲಾರಿ ಚಾಲನೆಯಿಂದಾಗಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಪ್ರಕರಣ ಸಂಬಂಧ ಲಾರಿ ಚಾಲಕ ಸಿದ್ದೀಕ್ ನಿಗೆ ಬೆಳ್ತಂಗಡಿ ನ್ಯಾಯಾಲಯಲ್ಲಿ ಒಂದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಬಳಿಕ ಈ ಪ್ರಕರಣದ ವಿರುದ್ಧ ಚಾಲಕ ಸಿದ್ದೀಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಕೂಡ ಬೆಳ್ತಂಗಡಿ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದು ಶಿಕ್ಷೆ ಖಾಯಂ ಮಾಡಿತ್ತು. ಬಳಿಕ ಆರೋಪಿ ಲಾರಿ ಚಾಲಕ ತಲೆಮರೆಸಿಕೊಂಡಿದ್ದು., ಇದೀಗ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣ 117/2006 ಕಲಂ, 279, 304 (ಎ) ಸುಮಾರು 19 ವರ್ಷದ ಹಿಂದಿನ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಫೆ.6 ರಂದು ಬಂಟ್ವಾಳ ಪೊಲೀಸ್ ಉಪ ಅಧಿಕ್ಷಕರು ವಿಜಯ್ ಪ್ರಸಾದ್ ರವರ ನಿರ್ದೇಶನದಂತೆ, ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪುರ ಮಠ, ಉಪ ನೀರಿಕ್ಷಕರು ಮುರಳೀಧರ ಮತ್ತು ಯಲ್ಲಾಪ್ಪ ರವರ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿ ವ್ರಷಭ , ಚರಣ್, ದರೇಶ್ ರವರು ಬಂಧಿಸಿ ಮಾನ್ಯ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಮಂಗಳೂರು ಸಬ್ ಜೈಲಿಗೆ ಕಳುಹಿಸಿದೆ.