ಮಂಗಳೂರು | ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ AI ಪ್ರಾಮುಖ್ಯತೆʼ ಕುರಿತು ಕಾರ್ಯಾಗಾರ

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಲಿಟೆಕ್ನಿಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು "ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ AI ಭವಿಷ್ಯ ಮತ್ತು ಪ್ರಾಮುಖ್ಯತೆ" ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು.
ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಪ್ರೊ. ಪೃಥ್ವಿರಾಜ್ ಎಂ ಅವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿದೆ. ಬಿಐಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಐ. ಮಂಝೂರ್ ಬಾಷಾ ಕಾರ್ಯಾಗಾರವನ್ನು ಉದ್ಘಾಟಿಸಿದ್ದಾರೆ.
ಆಫೆನ್ಸೊ ಹ್ಯಾಕರ್ಸ್ ಅಕಾಡೆಮಿಯ ಸಿಇಎಚ್ ಅಬ್ದುಲ್ಲಾ ಬಾಸಿತ್ ಪಿ ಮತ್ತು ವಾಫಿ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ಮುಹಮ್ಮದ್ ಹಾಶಿಮ್ ಅವರು ಕಾರ್ಯಗಾರದಲ್ಲಿ ಉಪನ್ಯಾಸವನ್ನು ನೀಡಿದ್ದಾರೆ. ಕಾರ್ಯಾಗಾರವು AI ಪರಿಕರಗಳು ಮತ್ತು ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದ್ದು, ವೆಬ್ ಡೆವಲಪ್ ಮೆಂಟ್, ಸೈಬರ್ ಭದ್ರತೆ, AI ಯೊಂದಿಗೆ ಸ್ಟಾರ್ಟ್ಅಪ್, ರೊಬೊಟಿಕ್ಸ್ ಮತ್ತು ಯಾಂತ್ರೀಕರಣದಲ್ಲಿ AI ಚಾಲಿತ ಪ್ರಗತಿಗಳು, ಬ್ಲಾಕ್ಚೈನ್ ತಂತ್ರಜ್ಞಾನ, ವರ್ಚುವಲ್ ರಿಯಾಲಿಟಿ ಮತ್ತು ಮೆಟಾವರ್ಸ್, ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಉಪನ್ಯಾಸವನ್ನು ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಮುಹಮ್ಮದ್ ಅನಸ್ ಧನ್ಯವಾದ ಸಮರ್ಪಣೆ ಮಾಡಿದ್ದಾರೆ.