Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಕರಾವಳಿಯ ಯುವಕನ ಕಾಲ್ನಡಿಗೆಯ ಹಜ್...

ಕರಾವಳಿಯ ಯುವಕನ ಕಾಲ್ನಡಿಗೆಯ ಹಜ್ ಯಾತ್ರೆ: ಹಜ್ ವೀಸಾದ ನಿರೀಕ್ಷೆಯಲ್ಲಿ ಪೆರಿಯಡ್ಕದ ಅಬ್ದುಲ್ ಖಲೀಲ್

► 2023ರ ಜನವರಿ 30ರಂದು ಆರಂಭಿಸಿದ್ದ ಯಾತ್ರೆ ► 2024ರ ಜನವರಿ 30ಕ್ಕೆ ಮಕ್ಕಾ ತಲುಪುವ ನಿರೀಕ್ಷೆ

ಹಂಝ ಮಲಾರ್ಹಂಝ ಮಲಾರ್21 Dec 2023 10:05 PM IST
share
ಕರಾವಳಿಯ ಯುವಕನ ಕಾಲ್ನಡಿಗೆಯ ಹಜ್ ಯಾತ್ರೆ: ಹಜ್ ವೀಸಾದ ನಿರೀಕ್ಷೆಯಲ್ಲಿ ಪೆರಿಯಡ್ಕದ ಅಬ್ದುಲ್ ಖಲೀಲ್

-ಹಂಝ ಮಲಾರ್

ಮಂಗಳೂರು: ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ ಪವಿತ್ರ ಹಜ್ ನಿರ್ವಹಿಸಲು ಕಾಲ್ನಡಿಗೆಯ ಯಾತ್ರೆ ಹೊರಟಿರುವ ಅಬ್ದುಲ್ ಖಲೀಲ್ (ನೌಶಾದ್ ಬಿಕೆಎಸ್) ಸದ್ಯ ಸೌದಿ ಅರೇಬಿಯಾದ ರಿಯಾದ್ ತಲುಪಿದ್ದಾರೆ. ಇನ್ನೊಂದು ತಿಂಗಳೊಳಗೆ ಅವರು ಮಕ್ಕಾ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಬ್ದುಲ್ ಖಲೀಲ್‌ಗೆ ಇನ್ನೂ ಹಜ್ ವೀಸಾ ಲಭಿಸಿಲ್ಲ. ಕಾಲ್ನಡಿಗೆಯ ಯಾತ್ರೆಯ ಮಧ್ಯೆಯೇ ಹಜ್ ವೀಸಾಕ್ಕೆ ಪ್ರಯತ್ನ ಮುಂದುವರಿಸಿರುವ ಅಬ್ದುಲ್ ಖಲೀಲ್, ಈ ನಿಟ್ಟಿನಲ್ಲಿ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಪೆರಿಯಡ್ಕದ ಮುಹಮ್ಮದ್ ಬಿ. ಮತ್ತು ನಫೀಸಾ ದಂಪತಿಯ ಆರು ಮಂದಿ ಪುತ್ರರ ಪೈಕಿ 5ನೆಯವನಾದ ಅಬ್ದುಲ್ ಖಲೀಲ್, ಸುಮಾರು 8 ಸಾವಿರಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಮಕ್ಕಾಕ್ಕೆ ತೆರಳಿ ಹಜ್ ನಿರ್ವಹಿಸುವ ಸಂಕಲ್ಪದೊಂದಿಗೆ 2023ರ ಜನವರಿ 30ರಂದು ತನ್ನ ಮನೆಯಿಂದ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ.

25ರ ಹರೆಯದ ಅಬ್ದುಲ್ ಖಲೀಲ್ ಅವಿವಾಹಿತ. ಎಸೆಸೆಲ್ಸಿ ಕಲಿತ ಬಳಿಕ ಬೆಂಗಳೂರಿಗೆ ತೆರಳಿ ವ್ಯಾಪಾರ ಆರಂಭಿಸಿದ್ದರು. 2021ರಲ್ಲಿ ಕಾಲ್ನಡಿಗೆಯಲ್ಲೇ ಕಾಶ್ಮೀರಕ್ಕೆ ಹೋಗಿ ಬಂದಿದ್ದ ಅಬ್ದುಲ್ ಖಲೀಲ್ ಪವಿತ್ರ ಹಜ್ ಕರ್ಮವನ್ನು ಕಾಲ್ನಡಿಗೆಯ ಮೂಲಕ ನಿರ್ವಹಿಸಬೇಕು ಎಂಬ ಅಭಿಲಾಷೆಯನ್ನು ತನ್ನ ಹೆತ್ತವರು, ಸಹೋದರರ ಜೊತೆ ವ್ಯಕ್ತಪಡಿಸಿದ್ದರು. ಮನೆಯವರ ಒಪ್ಪಿಗೆ ಲಭಿಸಿದೊಡನೆ ಅದಕ್ಕೆ ಬೇಕಾದ ಸಿದ್ಧತೆ ಆರಂಭಿಸಿದ್ದ ಅಬ್ದುಲ್ ಖಲೀಲ್, 2023ರ ಜನವರಿ 30ರಂದು ತನ್ನ ಮನೆಯಿಂದ ಕಾಲ್ನಡಿಗೆಯ ಯಾತ್ರೆ ಆರಂಭಿಸಿದ್ದರು.

ಪೆರಿಯಡ್ಕದಿಂದ ಉಪ್ಪಿನಂಗಡಿ - ಮಾಣಿ - ಕಲ್ಲಡ್ಕ - ಉಳ್ಳಾಲ - ಮಂಗಳೂರು - ಉಡುಪಿ - ಭಟ್ಕಳ - ಅಂಕೋಲ - ಯಲ್ಲಾಪುರ - ಬೆಳಗಾವಿ - ಪುಣೆ - ಮುಂಬೈ - ಗುಜರಾತ್ - ರಾಜಸ್ತಾನ - ಹರ್ಯಾಣ - ಹೊಸದಿಲ್ಲಿ - ಉತ್ತರ ಪ್ರದೇಶ-ಪಂಜಾಬ್‌ಗೆ ತಲುಪಿದರು.

ಆ ಬಳಿಕ ಪಾಕಿಸ್ತಾನ - ಒಮಾನ್-ದುಬೈ ದಾಟಿ ಬಳಿಕ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ಗೆ ತಲುಪಿದ್ದಾರೆ. ಅಂದರೆ ಸತತ 11 ತಿಂಗಳ ಕಾಲ ಗಾಳಿ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೆ ಗುಡ್ಡಗಾಡು, ಮರುಭೂಮಿ, ಕಾಂಕ್ರಿಟ್-ಡಾಮಾರು-ಮಣ್ಣಿನ ರಸ್ತೆಯಲ್ಲಿ ಹೆಜ್ಜೆಗಳನ್ನು ಹಾಕುತ್ತಾ ಸಾಗಿರುವ ಅಬ್ದುಲ್ ಖಲೀಲ್ 2024ರ ಜನವರಿ 30ಕ್ಕೆ ಮಕ್ಕಾ ತಲುಪುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮುನ್ನ ಹಜ್ ವೀಸಾ ಪಡೆಯಲು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್‌ರ ಸಹಕಾರ ಕೋರಿದ್ದಾರೆ.

ಹಜ್ ವೀಸಾಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಬ್ದುಲ್ ಖಲೀಲ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘ಅಜ್ಮೀರ್, ಕಾಶ್ಮೀರಕ್ಕೂ ನಡೆದು ಹೋಗಿದ್ದೆ’

ನಾನು ಮೊದಲೇ ನಡಿಗೆ ಪ್ರಿಯ. ಎಷ್ಟೇ ದೂರಕ್ಕಾದರೂ ನಡಿಗೆಯನ್ನೇ ಹವ್ಯಾಸವಾಗಿಸಿಕೊಂಡಿದ್ದೆ. 2021ರಲ್ಲಿ ಅಜ್ಮೀರ್‌ಗೆ ನಡೆದುಕೊಂಡು ಹೋಗಿದ್ದೆ. ಅಲ್ಲಿಂದ ದೇಶದ ತುತ್ತತುದಿಯಲ್ಲಿರುವ ಕಾಶ್ಮೀರಕ್ಕೂ ನಡೆದುಕೊಂಡು ಹೋಗಿದ್ದೆ. ಆವಾಗಲೇ ಪವಿತ್ರ ಹಜ್ ಯಾತ್ರೆಗೆ ನಡೆದುಕೊಂಡು ಹೋಗುವ ಸಂಕಲ್ಪ ಮಾಡಿದೆ. ಕಾಶ್ಮೀರದಿಂದ ಮರಳಿದ ಬಳಿಕ ನನ್ನ ಮನದ ಇಂಗಿತವನ್ನು ತಂದೆ-ತಾಯಿ ಮತ್ತು ಸಹೋದರರ ಬಳಿ ವ್ಯಕ್ತಪಡಿಸಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ ಬಳಿಕ ಯಾತ್ರೆಗೆ ಬೇಕಾದ ಸಿದ್ಧತೆ ನಡೆಸಿದೆ ಎಂದು ಅಬ್ದುಲ್‌ ಖಲೀಲ್ ಹೇಳುತ್ತಾರೆ.

ನನಗೆ ಎಲ್ಲೂ ಯಾವುದೇ ಸಮಸ್ಯೆಯಾಗಲಿಲ್ಲ. ಎಲ್ಲರೂ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನನಗೆ ಸರ್ವ ವಿಧದ ಸಹಕಾರ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳಂತೂ ನಿರೀಕ್ಷೆಗೂ ಮೀರಿ ನನಗೆ ರಕ್ಷಣೆಯ ವ್ಯವಸ್ಥೆ ಮಾಡಿದ್ದರು. ಈವರೆಗೆ ನಾನು ಸುಮಾರು 7,100 ಕಿ.ಮೀ. ಕ್ರಮಿಸಿದ್ದೇನೆ. ದಿನಕ್ಕೆ 25ರಿಂದ 60 ಕಿ.ಮೀ.ವರೆಗೆ ನಡೆದಿರುವೆ. ನಿರ್ಜನ ಪ್ರದೇಶಕ್ಕೆ ರಾತ್ರಿ ತಲುಪಿದಾಗ ಬಸ್ ಪ್ರಯಾಣಿಕರ ತಂಗುದಾಣದಲ್ಲೂ ಮಲಗಿದ್ದೆ. ವಸತಿಗೃಹ, ಮಸೀದಿಯಲ್ಲೂ ತಂಗಿದ್ದೇನೆ. ಇನ್ನು ಸುಮಾರು 900 ಕಿ.ಮೀ. ಕ್ರಮಿಸಲು ಬಾಕಿ ಇದೆ. ತಿಂಗಳೊಳಗೆ ಮಕ್ಕಾ ತಲುಪುವ ವಿಶ್ವಾಸವಿದೆ. ಅದರೊಳಗೆ ಹಜ್ ವೀಸಾ ಲಭಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿರುವೆ.

- ಅಬ್ದುಲ್ ಖಲೀಲ್ (ನೌಶಾದ್ ಬಿಕೆಎಸ್)

ನನ್ನ ಸಹೋದರ ಯಾವುದೇ ಪ್ರಚಾರಕ್ಕಾಗಿ ಹಂಬಲಿಸಿದವನಲ್ಲ. ಹಾಗಾಗಿ 2023ರ ಜನವರಿ 30ರಂದು ಮನೆಯಿಂದ ಯಾತ್ರೆ ಆರಂಭಿಸಿದಾಗಲೂ ಅವ ಪ್ರಚಾರದ ಹಿಂದೆ ಬೀಳಲಿಲ್ಲ. ಅವನ ಪಾಡಿಗೆ ಯಾತ್ರೆ ಆರಂಭಿಸಿದ. ಕರ್ನಾಟಕದ ಗಡಿ ದಾಟಿದ ಬಳಿಕ ಬೇರೆ ಬೇರೆ ರಾಜ್ಯದ ಜನರು ಆತನಿಗೆ ಅದ್ದೂರಿಯ ಸ್ವಾಗತ ನೀಡತೊಡಗಿದರು. ಪೊಲೀಸರೂ ರಕ್ಷಣೆ ನೀಡಿದರು. ನಾನು ಕೂಡ 9 ತಿಂಗಳ ಕಾಲ ಅವನನ್ನು ವಾಹನದಲ್ಲಿ ಹಿಂಬಾಲಿಸಿದೆ. ಪಂಜಾಬ್ ಗಡಿವರೆಗೂ ಹೋಗಿ ಬಂದೆ. ಅಲ್ಲಾಹನ ಅಪಾರ ಅನುಗ್ರಹದಿಂದ ಈವರೆಗೆ ಅವನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲರೂ ಅವನ ಮೇಲೆ ಅಪಾರ ಪ್ರೀತಿ ತೋರಿದರು. 2024ರ ಜನವರಿ 30ಕ್ಕೆ ಅವ ಪವಿತ್ರ ಮಕ್ಕಾ ತಲುಪುವ ವಿಶ್ವಾಸವಿದೆ. ಅವನ ಕಾಲ್ನಡಿಗೆಯ ಯಾತ್ರೆಗೆ ಸಹಕರಿಸಿದ ಸರ್ವರಿಗೂ ನಾವು ಅಭಾರಿಯಾಗಿದ್ದೇವೆ. ಅವನ ಉದ್ದೇಶ ಈಡೇರಬೇಕಾದರೆ ಹಜ್ ವೀಸಾ ಲಭಿಸಬೇಕು. ಅದಕ್ಕಾಗಿ ಪ್ರಯತ್ನ ಮುಂದುವರಿದಿದೆ. -ನೌಫ್ ಪೆರಿಯಡ್ಕ, (ಅಬ್ದುಲ್ ಖಲೀಲ್‌ನ ಸಹೋದರ)

ಕಾಲ್ನಡಿಗೆಯ ಮೂಲಕ ಹಜ್ ಯಾತ್ರೆ ಮಾಡುತ್ತಿರುವ ಅಬ್ದುಲ್ ಖಲೀಲ್ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಆತ ಕಾಲ್ನಡಿಗೆಯ ಹಜ್ ಯಾತ್ರೆ ಮಾಡುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ ತಕ್ಷಣ ಪೆರಿಯಡ್ಕದಿಂದ ಉಪ್ಪಿನಂಗಡಿವರೆಗೆ ದಫ್ ಮೆರವಣಿಗೆಯ ಮೂಲಕ ನಾವು ಆತನನ್ನು ಬೀಳ್ಕೊಟ್ಟೆವು. ನೂರಾರು ವರ್ಷದ ಹಿಂದೆ ವಾಹನ ಸೌಕರ್ಯವಿರಲಿಲ್ಲ. ಹಾಗಾಗಿ ಆವಾಗ ಕಾಲ್ನಡಿಗೆಯ ಯಾತ್ರೆಯು ಅನಿವಾರ್ಯವಾಗಿತ್ತು. ಆದರೆ ಇಂದು ಎಲ್ಲ ಸೌಲಭ್ಯವಿದ್ದರೂ ಅದನ್ನು ಬದಿಗೊತ್ತಿ ಕಾಲ್ನಡಿಗೆಯ ಯಾತ್ರೆ ಹೊರಟಿರುವ ಅಬ್ದುಲ್ ಖಲೀಲ್‌ನ ಸಂಕಲ್ಪ ಈಡೇರಲಿ ಎಂದು ಆಶಿಸುವೆವು.

- ಬಿ.ಎಂ. ಮುಹಮ್ಮದ್ ಬಶೀರ್, ಪ್ರಧಾನ ಕಾರ್ಯದರ್ಶಿ

ಮುಹಿಯುದ್ದೀನ್ ಜುಮಾ ಮಸ್ಜಿದ್ ಪೆರಿಯಡ್ಕ
















share
ಹಂಝ ಮಲಾರ್
ಹಂಝ ಮಲಾರ್
Next Story
X